ಕಾರ್ಕಳ: ಅಜೆಕಾರಿನ ಮನೋಜ್ ಟ್ರೇಡರ್ಸ್ ಅಂಗಡಿ ಮಾಲೀಕ ಮಂಜುನಾಥ ಹೆಗ್ಡೆ ಎಂಬವರು ಪಡಿತರ ಅಕ್ಕಿಯನ್ನು ಗ್ರಾಹಕರಿಂದ ಅತೀ ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಬೆಲೆಗೆ ರೈಸ್ ಮಿಲ್ ಹಾಗೂ ರಖಂ ಖರೀದಿದಾರರಿಗೆ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಅಕ್ರಮವಾಗಿ ಅಂಗಡಿಯಲ್ಲಿ ದಾಸ್ತಾನು ಇರಿಸಿರುವ ಮಾಹಿತಿ ಪಡೆದ ಕಾರ್ಕಳ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು 100 ಅಕ್ಕಿ ಚೀಲಗಳಲ್ಲಿ ಸೀಜ್ ಮಾಡಿದ್ದಾರೆ.
ಕಾರ್ಕಳ ಆಹಾರ ಇಲಾಖೆಯ ಆಹಾರ ನಿರೀಕ್ಷಕಿ ಸುಮತಿ ಅವರ ನೇತೃತ್ವದ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿ ಗೋಡಾನ್ ನಲ್ಲಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ನಡೆದ ತಕ್ಷಣವೇ ಮಾಲೀಕ ಮಂಜುನಾಥ ಹೆಗ್ಡೆ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.ಈ ಕುರಿತು ಆಹಾರ ನಿರೀಕ್ಷಕಿ ಸುಮತಿ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.