ಕಾರ್ಕಳ: ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ 9 ಸದಸ್ಯರ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಮುಜರಾಯಿ ಇಲಾಖೆ ಆದೇಶಿಸಿದೆ.
ಪ್ರಧಾನ ಅರ್ಚಕರಾಗಿ ಕೃಷ್ಣಮೂರ್ತಿ ಭಟ್, ಸಾಮಾನ್ಯ ವರ್ಗದಿಂದ ದೇವಸ್ಯ ಶಿವರಾಮ ಶೆಟ್ಟಿ, ಪ್ರೀತೇಶ್ ಶೆಟ್ಟಿ ಕುಂಠಿನಿ, ಭರತ್ ಶೆಟ್ಟಿ ಪಮ್ಮೊಟ್ಟು, ಪ್ರಕಾಶ್ ಶೆಟ್ಟಿ ಮರ್ಣೆ ಅಜೆಕಾರು, ವಿಶ್ವನಾಥ ಪೂಜಾರಿ ಕೊಂಬಗುಡ್ಡೆ ಆಯ್ಕೆಯಾಗಿದ್ದಾರೆ.
ಮಹಿಳಾ ವರ್ಗದಿಂದ ಯಶೋದಾ ಶೆಟ್ಟಿ ಬೊಂಡುಕುಮೇರಿ, ವೀಣಾ ಮಡಿವಾಳ ದಾಸಗದ್ದೆ , ಪರಿಶಿಷ್ಟ ಪಂಗಡದಿಂದ ಗಣೇಶ್ ನಾಯ್ಕ್ ಕಾಡುಹೊಳೆ ಆಯ್ಕೆಯಾಗಿದ್ದಾರೆ.
ಇವರನ್ನು ಮುಂದಿನ 3 ವರ್ಷಗಳ ಅವಧಿಗೆ ಸದಸ್ಯರನ್ನಾಗಿ ನೇಮಿಸಿ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಧರ್ಮಾದಾಯ ದತ್ತಿ ಇಲಾಖೆ ಆದೇಶಿಸಿದೆ.