ಕಾರ್ಕಳ: ಹವಾಮಾನ ಅಧಾರಿತ ಕಾಳುಮೆಣಸು ಹಾಗೂ ಅಡಿಕೆ ಬೆಳೆ ವಿಮೆಯ ನೊಂದಣಿ ಪ್ರಕ್ರಿಯೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಈ ಹಿಂದೆ ಜೂನ್ 30 ಬೆಳೆ ವಿಮೆ ನೋಂದಣಿಗೆ ಅಂತಿಮ ದಿನಾಂಕವಾಗಿದ್ದು,ಇದೀಗ
ಕೇಂದ್ರ ಸರ್ಕಾರದ ಒಪ್ಪಿಗೆಯ ಮೇರೆಗೆ ಉಡುಪಿ ಜಿಲ್ಲೆಯಾದ್ಯಂತ ಬೆಳೆ ವಿಮೆ ನೋಂದಣಿಗೆ ಜುಲೈ 15ರವರೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಕಾರ್ಕಳ ಹೆಬ್ರಿ ತಾಲೂಕಿನ ರೈತರು ಜುಲೈ15 ರೊ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬೇಕೆಂದು ಕಾರ್ಕಳ ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕಾ ಸಹಾಯ ನಿರ್ದೇಶಕ ಶ್ರೀನಿವಾಸ ಬಿ.ವಿ ತಿಳಿಸಿದ್ದಾರೆ.