ಹೆಬ್ರಿ: ವರ್ಕ್ ಫ್ರಂ ಹೋಂ ಹೆಸರಿನಲ್ಲಿ ಡಾಟಾ ಎಂಟ್ರಿ ಕೆಲಸ ಕೊಡುವುದಾಗಿ ನಂಬಿಸಿ ಹೆಬ್ರಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೆಬ್ರಿಯ ರಮೇಶ್ ಎಂಬವರು ಕಳೆದ 2024ರ ಡಿಸೆಂಬರ್ ರಲ್ಲಿ ಮೊಬೈಲ್ನಲ್ಲಿ ಲೋಕಲ್ ಜಾಬ್ ಯಾಪ್ ನಲ್ಲಿ ಸನ್ ಸೈನ್ ಹೆಚ್,ಆರ್ ಸಲ್ಯುಸನ್ ಬೆಂಗಳೂರು ಎಂಬ ಹೆಸರಿನ ಕಂಪೆನಿಯಿಂದ ಡಾಟಾ ಎಂಟ್ರಿ ಬಗ್ಗೆ ವರ್ಕ ಪ್ರಂ ಹೋಮ್ ಎಂಬ ಜಾಹಿರಾತಿನಂತೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಕಂಪೆನಿಯವರು ಕಳುಹಿಸಿದ ಸ್ಕಾನರ್ಗೆ 19/12/2024 ರಂದು 500 ರೂ. ಹಣ ಹಾಕಿ ನೊಂದಣಿ ಮಾಡಿದ್ದರು. ನಂತರ ಮೆಸೆಜ್ ಮಾಡಿ ಸೆಕ್ಯೂರಿಟಿ ಡೆಪಾಸಿಟ್ ಗಾಗಿ ರೂ.2,050 ಹಾಕುವಂತೆ ತಿಳಿಸಿ, ರಂಜಿತ್ ಎನ್ನುವ ಹೆಸರಿನಲ್ಲಿ ಮೇಸೆಜ್ ಮಾಡಿ ರಮೇಶ್ ಅವರಿಗೆ ಅಮೆಜಾನ್ಗೆ ಸಂಬಂದಿಸಿದ ಡಾಟಾ ಎಂಟ್ರಿ ಮಾಡುವ ಡಾಟಾ ಕಳುಹಿಸಿದ್ದು ನಾಲ್ಕು ದಿನದ ಒಳಗೆ ಕಳಹಿಸದೆ ಇದ್ದಲ್ಲಿ 2,500 ರೂ. ಹಣ ಹಾಕಿ ಎಕ್ಟೆಂಡ್ ಮಾಡಿ ಕೊಳ್ಳಬೇಕು ಎಂದು ಹೇಳಿ ಸ್ಕಾನರ್ ಕಳುಹಿಸಿ 2500 ರೂ. ಹಣವನ್ನು ಹಾಕಿಸಿಕೊಂಡಿದ್ದರು.
ನಂತರ ಸಾಲರಿ ಅಕೌಂಟ್ ಕ್ರೀಷೆಸನ್ ,ಎರರ್ ಮೊಡಿಪೈ, ಎರ್ ಕಾನ್ಸಲೇಷನ್, ಅಕೌಂಟ್ ಸಮಸ್ಯೆ ಇರುವುದಾಗಿ, ಡಿಡಿ ಮಾಡುವುದಾಗಿ ಮತ್ತು ಬೇರೆ ಬೇರೆ ಚಾರ್ಜಸ್ ಎಂದೆಲ್ಲಾ ಹೇಳಿ ಐಶ್ವರ್ಯ ಅಕೌಂಟೆಂಟ್ ಹಾಗೂ ಶ್ರೀಧರ ಎಂ,ಡಿ ಎಂಬುದಾಗಿ ಸಂಪರ್ಕಿಸಿ ನಂಬಿಕೆ ಬರುವಂತೆ ವರ್ತಿಸಿದ್ದರು. ನಂತರ ಹಂತ ಹಂತವಾಗಿ 9/12/2024 ರಿಂದ 20/06/2025 ರವರೆಗೆ ಒಟ್ಟು 98 ಟ್ರಾಜೆಂಕ್ಷನ್ ಮೂಲಕ ರಮೇಶ್ ಅವರಿಂದ ಒಟ್ಟು 2,02,046/- ರೂ. ಹಣವನ್ನು ಸ್ಕಾನರ್, ಪೋನ್ ಪೇ, ಮೂಲಕ ಹಾಕಿಸಿಕೊಂಡಿದ್ದು ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.