

ಕಾರ್ಕಳ: ತಾಲೂಕಿನ ಹಲವೆಡೆ ಸೋಮವಾರ ಮುಂಜಾನೆ ಬೀಸಿದ ಭಾರೀ ಗಾಳಿಮಳೆಗೆ ಮನೆಗಳಿಗೆ ಮರಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಎರ್ಲಪಾಡಿ ಗ್ರಾಮದ ಕುಂಟಲ್ಪಾಡಿ ಎಂಬಲ್ಲಿನ ವಿಲಿಯಂ ಡಿ ಸೋಜ ಬಿನ್ ಮಾರ್ಷಲ್ ಡಿ ಸೋಜ ಎಂಬುವರ ಮನೆಯ ಛಾವಣಿ ಹಾನಿಯಾಗಿ 70 ಸಾವಿರ ನಷ್ಟ,ನಿಟ್ಟೆ ಗ್ರಾಮದ ಹೇನೊಟ್ಟು ಎಂಬಲ್ಲಿನ ಲಿಯೊ ಸಲ್ದಾನ ಎಂಬವರ ಮನೆಗೆ ತೆಂಗಿನ ಮರ ಬಿದ್ದು 40 ಸಾವಿರ ನಷ್ಟ,ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಸುಲೋಚನ ಶೆಟ್ಟಿ ಎಂಬವರ ಮನೆಯ ಮೇಲೆ ಗಾಳಿಯಿಂದ ಮರ ಬಿದ್ದು ಸಿಮೆಂಟ್ ತಗಡಿನ ಚಪ್ಪರಕ್ಕೆ ಹಾನಿಯಾಗಿದ್ದು 8 ಸಾವಿರ ನಷ್ಟ,
ಮಿಯ್ಯಾರು ಗ್ರಾಮದ ಬೋರ್ಕಟ್ಟೆ ರಮಣಿ ಎಂಬವರ ಕೊಟ್ಟಿಗೆ ಭಾರೀ ಗಾಳಿಮಳೆಗೆ ಸಂಪೂರ್ಣ ಕುಸಿದು 1 ಲಕ್ಷ ರೂ ನಷ್ಟ ಸಂಭವಿಸಿದೆ



