ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಲ್ಪನಾ ಭಾಸ್ಕರ್ , ರಾಷ್ಟ್ರಸೇವಿಕಾ ಸಮಿತಿಯ ಉಡುಪಿ ಜಿಲ್ಲಾ ಸೇವಾ ಪ್ರಮುಖ್ ಇವರು ಮಾತನಾಡಿ, ನಮ್ಮ ಪೂರ್ವಜರು ಪ್ರಕೃತಿಯ ಆರಾಧಕರು . ಇಂದಿನ ಜನಜೀವನಕ್ಕೆ ಬೇಕಾದ ಸರ್ವಸ್ವವನ್ನು ನೀಡಿದವರು. ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೂ ಎಲ್ಲಾ ಮೌಲ್ಯವನ್ನು ನೀಡಿದ್ದಾರೆ. ಆದ್ದರಿಂದ ನಾವು ಗುರುಪೂರ್ಣಿಮೆಯ ಪರ್ವಕಾಲದಲ್ಲಿ ನಮ್ಮ ಪ್ರತಿವರ್ಷದ ಜನ್ಮದಿನದಂದು ಗಿಡಗಳನ್ನು ನೆಟ್ಟು ಉತ್ತಮ ಸಂಕಲ್ಪವನ್ನು ಮಾಡಿ , ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಗವಾ ಧ್ವಜಕ್ಕೆ ವಂದಿಸಿ, ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್ , ಶಕುಂತಲಾ ಮತ್ತು ಸಂಸ್ಥೆಯ ಸಂಸ್ಕಾರ ಪ್ರಮುಖ್ ಮೀನಾಕ್ಷಿ ಮಾತಾಜಿ ಹಾಗೂ ಗುರುವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶಾನ್ವಿ ಸ್ವಾಗತಿಸಿ , ಭೂಮಿಕಾ ನಿರೂಪಿಸಿ, ಪ್ರಾರ್ಥನಾ ವಂದಿಸಿದರು .