Share this news

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜೂನ್ 4 ರಂದು ಆಯೋಜಿಸಲಾಗಿದ್ದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ್ದು, ದುರಂತದಲ್ಲಿ 11 ಮಂದಿ ಜೀವ ಕಳೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಹೈಕೋರ್ಟ್​​ ಗೆ ಗೆ ತನ್ನ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದು RCB ಯೇ ನೇರ ಹೊಣೆ ಎಂದು ಆರೋಪಿಸಿದೆ.

ಪೂರ್ವ ಸಿದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜನೆ ಮಾಡಿರುವುದೇ ದುರ್ಘಟನೆಗೆ ಕಾರಣ . ಅಲ್ಲದೇ ಆರ್​ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಮಾತನಾಡಿದ್ದ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದು ಸೇರಿದಂತೆ ಅನೇಕ ಲೋಪದೋಷಗಳನ್ನು ವರದಿಯಲ್ಲಿ ಎತ್ತಿ ತೋರಿಸಿದೆ. ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರೂ ಸಹ, ಅಗಾಧ ಜನಸಂದಣಿ ಸೇರಿತ್ತು ಎಂದು ಸರ್ಕಾರ ಹೇಳಿದೆ.

ಜೂನ್ 4 ರಂದು, ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿತು. ಅಂದು ಬೆಳಗ್ಗೆ 8.55ರ ಸುಮಾರಿಗೆ ಆರ್​ಸಿಬಿ, ವಿರಾಟ್ ಕೊಹ್ಲಿ ಅವರ ವಿಡಿಯೋ ಕ್ಲಿಪ್ ಅನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಆರ್​ಸಿಬಿ ಅಧಿಕೃತ ಟ್ವಿಟರ್​ ಹ್ಯಾಂಡಲ್ @Rcbtweets ನಲ್ಲಿ ಕೊಹ್ಲಿ ಮಾತನಾಡಿದ್ದ ವಿಡಿಯೋ ಶೇರ್ ಮಾಡಿದೆ. ಅದರಲ್ಲಿ ಆರ್​ಸಿಬಿ, ಅಭಿಮಾನಿಗಳೊಂದಿಗೆ ಬೆಂಗಳೂರಲ್ಲಿ ಸೆಲೆಬ್ರೇಷನ್ ಮಾಡಲು ಉದ್ದೇಶಿಸಿದೆ ಎಂದು ಕೊಹ್ಲಿ ಹೇಳಿದ್ದರು.
ಅದೇ ದಿನ ಮಧ್ಯಾಹ್ನ 3:14ಕ್ಕೆ ಮತ್ತೊಂದು ಪೋಸ್ಟ್ ಮಾಡಿತ್ತು. ಸಂಜೆ 5:00 ರಿಂದ 6:00 ರವರೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಘೋಷಿಸಿತ್ತು. ಈ ಮೆರವಣಿಗೆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಲೆಬ್ರೇಷನ್ ನಡೆಯಲಿವೆ ಎಂದು ಹೇಳಿದೆ. ಇದೇ ಪೋಸ್ಟ್‌ನಲ್ಲಿ shop.royalchallengers.com ನಲ್ಲಿ ಉಚಿತ ಪಾಸ್‌ಗಳು (ಸೀಮಿತ ಪ್ರವೇಶ) ಲಭ್ಯವಿದೆ ಎಂದು ಉಲ್ಲೇಖಿಸಿದೆ. ಅಲ್ಲಿಯವರೆಗೆ ಪಾಸ್‌ಗಳ ವಿತರಣೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅಂದರೆ ಆರ್‌ಸಿಬಿ ಹಿಂದಿನ ಪೋಸ್ಟ್‌ಗಳ ಪ್ರಕಾರ ಸೆಲೆಬ್ರೇಷನ್ ಈವೆಂಟ್ ಎಲ್ಲರಿಗೂ ಮುಕ್ತವಾಗಿದೆ ಎಂದು ಸೂಚಿಸುತ್ತದೆ. ಹೀಗಾಗಿ ಮೈದಾನದ ಸುತ್ತ ಮೂರು ಲಕ್ಷಕ್ಕೂ ಹೆಚ್ಚು ಜನಸಾಗರ ಹರಿದು ಬರುವಂತೆ ಆರ್​ಸಿಬಿ ಮಾಡಿದೆ ಎಂದು ಸರ್ಕಾರ ಆರೋಪಿಸಿದೆ.

 

Leave a Reply

Your email address will not be published. Required fields are marked *