

ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಹಾನಿಯಾಗಿದ್ದು ಸಾವಿರಾರು ರೂ. ನಷ್ಟ ಸಂಭವಿಸಿದೆ.
ಕಲ್ಯಾ ಗ್ರಾಮದ ಪರಾಡಿ ಮನೆ ಎಂಬಲ್ಲಿ ಅಚ್ಯುತ ಆಚಾರ್ ಅವರ ಮನೆ ಹಾಗೂ ದನದ ಕೊಟ್ಟಿಗೆಗೆ ಮರ ಬಿದ್ದು ಅಂದಾಜು ರೂ.30,000 ನಷ್ಟವಾಗಿದೆ. ನಲ್ಲೂರು ಗ್ರಾಮದ ಚಿರಾಗ್ ಹಿಂಬದಿ ದರ್ಕಾಸು ಮನೆ ಎಂಬಲ್ಲಿ ರಾಜೀವಿ ಶೆಟ್ಟಿ ಎಂಬವರ ಮನೆಯು ಜುಲೈ.25 ರಂದು ಮದ್ಯಾಹ್ನ ಬೀಸಿದ ಗಾಳಿ ಮಳೆಯಿಂದಾಗಿ ಭಾಗಶ ಹಾನಿಯಾಗಿದ್ದು, ಅಂದಾಜು ರೂ. 10,000 ನಷ್ಟವಾಗಿದೆ. ರೆಂಜಾಳ ಗ್ರಾಮದ ಮದ್ರಾಂಪಲ್ ಬಳಿ ಸುನೀತಾ ಎಂಬವರ ಮನೆಯು ಗಾಳಿ ಮಳೆಯಿಂದಾಗಿ ಹಾನಿಯಾಗಿದ್ದು, ರೂ. 10,000 ನಷ್ಟವಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



