Share this news

ಕಾರ್ಕಳ: ಮಳೆಗಾಲದಲ್ಲಿ ಕಡಲುಕೊರೆತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಡಲು ಕೊರೆತ ತಪ್ಪಿಸಲು ಭಾರೀ ಗಾತ್ರದ ಕಲ್ಲು ಹಾಕಲು ಟೆಂಡರ್ ನೀಡಲಾಗುತ್ತದೆ. ಆದರೆ ಕೆಲವು ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಇದನ್ನೇ ಬಂಡವಾಳವನ್ನಾಗಿಸಿ ಸರ್ಕಾರದ ಖಜಾನೆಗೆ ಕನ್ನ ಹಾಕಿ ಲಕ್ಷಾಂತರ ರೂ ಮೌಲ್ಯದ ಬೃಹತ್ ಗಾತ್ರದ ಶಿಲೆಕಲ್ಲುಗಳನ್ನು ಯಾವುದೇ ರಾಜಧನ ಪಾವತಿಸದೇ ಲೂಟಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ರಾಜಾರೋಷವಾಗಿ ಅಕ್ರವiವಾಗಿ ಕಲ್ಲು ಸಾಗಾಟ ಮಾಡುವ ವಿಚಾರ ತಿಳಿದು ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಸುಂದರ ಅವರು ಶನಿವಾರ ಲಾರಿಗಳನ್ನು ತಡೆದು ಪರವಾನಗಿ ತಪಾಸಣೆ ನಡೆಸಿದಾಗ ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ಕಲ್ಲು ಸಾಗಾಟ ಮಾಡುತ್ತಿರುವುದು ಕಂಡುಬAದಿದೆ.
ದಿನೇಶ ಎಂಬಾತ ನಂದಳಿಕೆ ಗ್ರಾಮದ ಬಾರೆಜಡ್ಡು ಎಂಬಲ್ಲಿAದ ಕಲ್ಲುಗಳನ್ನು ಹಿಟಾಚಿ ಬಳಸಿ ಉಲ್ಲಾಳದ ಕಡಲ್ಕೊರೆತ ಸ್ಥಳಕ್ಕೆ ಹಾಕಲು ಸಾಗಾಟ ಮಾಡುತ್ತಿರುವುದು ಬಯಲಾಗಿದೆ. ಇದಲ್ಲದೇ ದಿನೇಶ್, ಗಿರೀಶ ಮತ್ತು ಕಿಶೋರ್ ಗುರ್ಮೆ ಎಂಬವರು ಯಾವುದೇ ಪರವಾನಿಗೆ ಹೊಂದದೇ ಸರಕಾರಿ ಸ್ಥಳದಿಂದ ಶಿಲೆಕಲ್ಲುಗಳನ್ನು ಕಳವು ಮಾಡಿ ಹಿಟಾಚಿ ಮೂಲಕ ಲೋಡ್ ಮಾಡಿಸಿ ಸಾಗಾಟ ಮಾಡಲು ಲೋಡ್ ಮಾಡಿಸುತ್ತಿದ್ದು ಕಂಡುಬAದ ಹಿನ್ನಲೆಯಲ್ಲಿ ಪೊಲೀಸರು ಟಿಪ್ಪರ್ ಲಾರಿ, ಹಿಟಾಚಿ ಹಾಗೂ ಕಲ್ಲುಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 

 

 

Leave a Reply

Your email address will not be published. Required fields are marked *