Share this news

ಅಹಮದಾಬಾದ್, ಜುಲೈ 30: ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಸಮಾ ಪರ್ವೀನ್ ಎಂಬಾಕೆಯನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈಕೆ ದೇಶ ವಿರೋಧಿ ಕೃತ್ಯಗಳನ್ನು ಮಾಡುವ ಮೂಲಕ ಜಿಹಾದಿ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಳು ಎಂಬ ಆರೋಪವಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಇನ್‌ಸ್ಟಾಗ್ರಾಂ ಗುಂಪಿನಲ್ಲಿ ಸಕ್ರಿಯಳಾಗಿದ್ದಳು ಮತ್ತು ದೇಶ ವಿರೋಧಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಯುವಕರನ್ನು ಜಿಹಾದಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದಳು.

ಸಮಾ ಪರ್ವೀನ್ ಆನ್‌ಲೈನ್ ವೇದಿಕೆಗಳಲ್ಲಿ ಜಿಹಾದಿ ಪಿತೂರಿ ನಡೆಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ಗುಜರಾತ್ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ ಕೈದಾ ಜೊತೆ ನಂಟು ಹೊಂದಿರುವ ನಾಲ್ವರನ್ನು ಈ ಹಿಂದೆ ಗುಜರಾತ್ ಎಟಿಎಸ್ ಬಂಧಿಸಿತ್ತು. ಬಂಧಿತ ನಾಲ್ವರಲ್ಲಿ ಇಬ್ಬರು ಗುಜರಾತ್‌ನ ಅಹಮದಾಬಾದ್ ಮತ್ತು ಮೋಡಸಾದವರು. ಇನ್ನಿಬ್ಬರು ದೆಹಲಿ ಮತ್ತು ನೋಯ್ಡಾದವರು. ಈ ನಾಲ್ವರೂ ಅಲ್ ಕೈದಾ ಜತೆ ಸಂಪರ್ಕ ಹೊಂದಿದ್ದರು. ಈ ಭಯೋತ್ಪಾದಕರು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಷಯವನ್ನು ಹಂಚಿಕೊಳ್ಳುತ್ತಿದ್ದರು. ಅವರು ‘ಘಜ್ವಾ-ಎ-ಹಿಂದ್’ ಬಗ್ಗೆ ವೀಡಿಯೊಗಳು ಮತ್ತು ಭಾಷಣಗಳ ಮೂಲಕ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಈ ನಾಲ್ವರ ವಿಚಾರಣೆ ವೇಳೆ ಬೆಂಗಳೂರಿನಿಂದ ಕಾರ್ಯಾಚರಿಸುತ್ತಿರುವ ಸಮಾ ಪರ್ವೀನ್ ಬಗ್ಗೆ ಮಾಹಿತಿ ದೊರೆತಿದೆ.

 

 

 

 

 

 

 

Leave a Reply

Your email address will not be published. Required fields are marked *