Share this news

ಕಾರ್ಕಳ: ಕಳೆದ ಎರಡು ವರ್ಷಗಳಿಂದ ಬೈಲೂರಿನ ಪರಶುರಾಮ ಥೀಂ ಪಾರ್ಕ್ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಗ್ವಾದ ಇನ್ನೂ ಜೀವಂತವಾಗಿರುವಾಗಲೇ,ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಫೈಬರ್ ಬಳಸಿ ಪರಶುರಾಮನ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹಾದಿಬೀದಿ ರಂಪ ಮಾಡಿದ್ದ ಪರಿಣಾಮವಾಗಿ ಇಡೀ ಯೋಜನೆ ಸ್ಥಗಿತಗೊಂಡು ಸರ್ಕಾರ ಸಿಓಡಿ ತನಿಖೆಗೂ ಆದೇಶಿಸಿತ್ತು.ಸಿಓಡಿ ತನಿಖೆಗೆ ವಹಿಸಿದ ನಡುವೆ ಪರಶುರಾಮ ಮೂರ್ತಿ ಕಳ್ಳತನವಾಗಿದೆ ಎಂದು ಕಾಂಗ್ರೆಸ್ ನಿರ್ಮಿತಿ ಕೇಂದ್ರದ ಪಿಡಿ ಅರುಣ್ ಕುಮಾರ್ ಹಾಗೂ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧ ಕೇಸ್ ದಾಖಲಿಸಿತ್ತು.ಇದಾದ ಬಳಿಕ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಮತ್ತೆ ಪ್ರತಿಮೆ ಮರುಸ್ಥಾಪನೆಗೆ ಕಾಂಗ್ರೆಸ್ ಒಲವು ವ್ಯಕ್ತಪಡಿಸಿದ್ದು ಹಲವು ಚರ್ಚೆ ಹುಟ್ಟುಹಾಕಿದೆ.
ಇತ್ತ ಕಾಂಗ್ರೆಸ್ ಬಿಜೆಪಿ ಕಿತ್ತಾಟದಲ್ಲಿ ಸಧ್ಯಕ್ಕೆ ಪರಶುರಾಮ ಪ್ರತಿಮೆ ಮೂರ್ತಿ ಮರುಸ್ಥಾಪನೆ ಆಗೋದೇ ಡೌಟ್ ಎನ್ನುವ ನಡುವೆಯೇ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರತಿಮೆ ಪುನರ್ ಪ್ರತಿಷ್ಠಾಪನೆ ಕೋರಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಹೈಕೋರ್ಟ್‌ ಗೆ ಸಾರ್ವಜನಿಕ ಹಿತಾಶಕ್ತಿಯ ಅರ್ಜಿ ಸಲ್ಲಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಿರಂತರವಾಗಿ ಎರಡು ವರ್ಷಗಳಿಂದ ಪರಶುರಾಮ ಥೀಮ್ ಪಾರ್ಕ್ ವಿವಾದ ಜೀವಂತವಾಗಿರಿಸಿದ್ದ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಉಲ್ಟಾ ಹೊಡೆದಿದ್ದು ಪರಶುರಾಮ ಥೀಂ ಪಾರ್ಕ್‌ನಲ್ಲಿ ಪರಶುರಾಮನ ಮೂರ್ತಿಯನ್ನು ಮರುಸ್ಥಾಪಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್ ಗೆ ಸಲ್ಲಿಕೆಯಾದ ಪಿಐಎಲ್ ಅರ್ಜಿಯಲ್ಲಿ ಈ ಯೋಜನೆಗೆ ನವೀಕರಿತ ಟೆಂಡರ್ ಕರೆಯಬೇಕು ಹಾಗೂ ನುರಿತ ಶಿಲ್ಪಿಯನ್ನು ನೇಮಕ ಮಾಡಬೇಕೆಂದು ಉಲ್ಲೇಖಿಸಿದ್ದಾರೆ.
ಅಂದು ಡಿಸಿಎಂ ಡಿಕೆ ಶಿವಕುಮಾರ್,ಉದಯ ಶೆಟ್ಟಿ ಸೇರಿದಂತೆ ಕಾರ್ಕಳದ ಕಾಂಗ್ರೆಸ್ ನಾಯಕರು ಪರಶುರಾಮ ಥೀಮ್ ಪಾರ್ಕ್ ಯೋಜನೆ ಪೂರ್ಣಗೊಳಿಸಬಾರದು ಅದು ಮುಂದಿನ ವಿಧಾನಸಭಾ ಯಥಾಸ್ಥಿತಿಯಲ್ಲೇ ಇರಬೇಕು ಅದರಲ್ಲೇ ಚುನಾವಣೆ ನಡೆದು ಕಾಂಗ್ರೆಸ್ ಗೆಲ್ಲಬೇಕು ಎಂದು ಪರಶುರಾಮ ಥೀಮ್ ಪಾರ್ಕ್ ವಿವಾದವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ಯೋಜನೆ ವಿರೋಧಿಸಿದವರೇ ಇದೀಗ ಪರಶುರಾಮ ಥೀಮ್ ಪಾರ್ಕ್ ಮರು ನಿರ್ಮಾಣಕ್ಕೆ ದಿಢೀರ್ ಆಸಕ್ತಿ ತೋರುತ್ತಿರವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಯೋಜನೆ ಪೂರ್ಣಗೊಳಿಸಲು ಬಾಕಿ ಉಳಿದ ಹಣ ಬಿಡುಗಡೆಗೆ ಬಿಜೆಪಿ ಒತ್ತಾಯಿಸಿತ್ತು. ಆದರೆ ಸರ್ಕಾರ ಅನುದಾನ ನೀಡದೇ ಅಕ್ರಮ ಆರೋಪದ ತನಿಖೆಗೆ ಆದೇಶಿಸಿತ್ತು. ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ಶಾಸಕ ಸುನಿಲ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಆರೋಪಿಸುತ್ತಲೇ ಬಂದಿದ್ದಾರೆ.
ಪರಶುರಾಮ ಥೀಮ್ ಪಾರ್ಕ್ ಕುರಿತು ಕಾಂಗ್ರೆಸ್ ವಿನಾ ಕಾರಣ ವಿವಾದ ಸೃಷ್ಟಿಸುತ್ತಿದೆ ಎನ್ನುವ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ ಮಾಡಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

 

 

 

 

 

 

 

Leave a Reply

Your email address will not be published. Required fields are marked *