Share this news

ಬೆಳ್ತಂಗಡಿ. ಜು.31: ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಅನಾಮಿಕ ಸಾಕ್ಷಿದಾರ ಗುರುತಿಸಿದ್ದ 13 ಜಾಗದ ಪೈಕಿ 6ನೇ ಪಾಯಿಂಟ್ ಅಗೆದಾಗ ಇದರಲ್ಲಿ ಅಸ್ಥಿಪಂಜರದ ಅವಶೇಷಗಳು ಲಭಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಇದರೊಂದಿಗೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ತನಿಖೆಯಲ್ಲಿ ಮಹತ್ವದ ಪ್ರಗತಿ ಕಾಣಿಸಿಕೊಂಡಿದೆ.

ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಜಾಗ ಗುರುತಿಸುವೆಕೆ ಮತ್ತು ಮಣ್ಣು ಆಗೆಯುವ ಸಮಯದಲ್ಲಿ ಸ್ಥಳ ಸಂಖ್ಯೆ 6 ರಲ್ಲಿ ಭಾಗಶಃ ಅಸ್ಥಿಪಂಜರದ ಅವಶೇಷಗಳು ಕಂಡುಬAದಿವೆ, ಇದು ಪ್ರಸ್ತುತ ತನಿಖೆಯಲ್ಲಿರುವ ಪ್ರಕರಣದಲ್ಲಿ ಅಂತಹ ಪುರಾವೆಗಳನ್ನು ನೀಡುವ ಮೊದಲ ಸ್ಥಳವಾಗಿದೆ ಎನ್ನಲಾಗುತ್ತಿದೆ.
ಪತ್ತೆಯಾದ ಮೂಳೆಗಳ ಅವಶೇಷಗಳನ್ನು ವಿಧಿವಿಜ್ಞಾನ ತಂಡವು ಹೆಚ್ಚಿನ ಪರೀಕ್ಷೆಗಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ. ಸಮಾಧಿ ಮಾಡಲಾದ ಶವದ ವಯಸ್ಸು, ಲಿಂಗ ಹಾಗೂ ಇತರೇ ವಿಚಾರಗಳನ್ನು ನಿರ್ಧರಿಸಲು ವಿಧಿವಿಜ್ಞಾನ ವಿಶ್ಲೇಷಣೆಯನ್ನು ಕೈಗೊಳ್ಳಲಾಗುತ್ತದೆ. ಶವಗಳನ್ನು ವಿಲೇವಾರಿ ಮಾಡಲಾಗಿದೆ ಎಂಬ ಅನಾಮಧೇಯ ವ್ಯಕ್ತಿಯ ಹೇಳಿಕೆ ಇದೀಗ ಮಹತ್ವ ಪಡೆದುಕೊಂಡಿದ್ದು, ಮುಂದಿನ ಬೆಳವಣಿಗೆಯ ಕುರಿತು ಸಾರ್ವಜನಿಕರಲ್ಲಿ ತೀವೃ ಕುತೂಹಲ ಮೂಡಿಸಿದೆ.

 

 

 

 

 

 

 

Leave a Reply

Your email address will not be published. Required fields are marked *