Share this news

ಅಜೆಕಾರು: ಮರ್ಣೆ ಗ್ರಾಮದ ಮೇಲ್ಮನೆ ಗ್ರಾಮದ ಚೇಳಿಬೆಟ್ಟು ಎಂಬಲ್ಲಿ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮರ್ಣೆ ಗ್ರಾಮದ ರಾಘು ನಾಯ್ಕ ಎಂಬವರ ತಂಗಿ ಅಮ್ಮಣಿ (52) ಮೃತಪಟ್ಟವರು.

ಅಮ್ಮಣಿ ಅವರು ಪತಿ ಪ್ರಭಾಕರ ಹಾಗೂ 2 ಹೆಣ್ಣು ಮಕ್ಕಳೊಂದಿಗೆ ಮರ್ಣೆ ಗ್ರಾಮದ ಮೇಲ್ಮನೆ ಚೇಳಿಬೆಟ್ಟು ಎಂಬಲ್ಲಿ ವಾಸವಾಗಿದ್ದು, ಜುಲೈ.30 ರಂದು ರಾತ್ರಿ ಅಮ್ಮಣಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಪತಿ ಕರೆ ಮಾಡಿ ತಿಳಿಸಿದ್ದರು. ಅಮ್ಮಣಿ ಅವರು ಅಜೆಕಾರು ದೆಪ್ಪುತ್ತೆಯ ಅಂಗನವಾಡ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *