ಹೆಬ್ರಿ: ಹೆಬ್ರಿ ತಾಲೂಕಿನ ಕಾರ್ಕಳ – ಹೆಬ್ರಿ ಮುಖ್ಯರಸ್ತೆಯ ಮುದ್ರಾಡಿ ಯಲ್ಲಿ ಕ್ರೇನ್ ಡಿಕ್ಕಿಯಾಗಿ ಪಾದಾಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುದ್ರಾಡಿ ಮುಖ್ಯರಸ್ತೆಯಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದ್ದು, ಉಪ್ಪಳದ ಸಂತೋಷ್ ಕುಮಾರ ಅವರು ಮುದ್ರಾಡಿ ಜಂಕ್ಷನ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮುದ್ರಾಡಿ ಜಂಕ್ಷನ್ನಿಂದ ಸ್ವಲ್ಪ ಮುಂದೆ ಕಾರ್ಕಳ ರಸ್ತೆಯ ಎಡ ಬದಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೆಬ್ರಿ ಕಡೆಯಿಂದ ಬಂದ ಕ್ರೇನ್ ಡಿಕ್ಕಿಯಾಗಿದೆ.
ಹೈಡ್ರಾ ಕ್ರೇನ್ ಚಾಲಕ ಕ್ರೇನ್ನ್ನು ವೇಗವಾಗಿ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದು ಸ್ಥಳೀಯರಾದ ಚಣಿಲ (75) ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.