Share this news

ಅಜೆಕಾರು: ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ  ಶಿಕ್ಷಕರನ್ನು ಗೌರವಿಸುವುದರೊಂದಿಗೆ ಅರ್ಥಪೂರ್ಣವಾಗಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚ್ ನ ಫಾದರ್ ಅವಿನಾಶ್ ಲೆಸ್ಲೀ ಪೈಸ್ ಕಾರ್ಯಕ್ರಮ ಉದ್ಘಾಟಿಸಿದರು.

ಶಾಲಾ ಸಂಚಾಲಕರಾದ ವಂದನನೀಯ ಗುರುಗಳು ಹೆನ್ರಿ ಮಾಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರನ್ನು ಮನರಂಜಿಸಲು ವಿದ್ಯಾರ್ಥಿ- ವಿದ್ಯಾರ್ಥಿನಿ ಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಫಾದರ್ ಅವಿನಾಶ್ ಮಾತನಾಡಿ, ಶಿಕ್ಷಕರು ಸಮಾಜದ ದೀಪಸ್ತಂಭಗಳಂತೆ. ಶಿಕ್ಷಕರು ನಮ್ಮ ಜೀವನಕ್ಕೆ ಜ್ಞಾನವನ್ನು ನೀಡುವವರು, ನಡತೆ-ಮೌಲ್ಯಗಳನ್ನು ಬೆಳೆಸುವವರು, ಒಳ್ಳೆಯ ನಾಗರಿಕರನ್ನಾಗಿ ರೂಪಿಸುವವರು. ತಾಯಂದಿರಂತೆ ಪ್ರೀತಿ ಹಾಗೂ ತಂದೆಯರಂತೆ ಶಿಸ್ತು ಕೊಡುವವರೂ ಆಗಿದ್ದಾರೆ ಎಂದರು.

ಬಳಿಕ 2025-26 ನೇ ಶಿಕ್ಷಕ ರಕ್ಷಕ ಸಂಘದ ಸರ್ವ ಸದಸ್ಯರು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಿದರು.ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆ ರೇಷ್ಮಾ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಷ್ಮಾ ರೋಡ್ರಿಗಸ್, ಹಾಗೂ ಶಿಕ್ಷಕ ರಕ್ಷಕ ಸಂಘದ ಸರ್ವ ಸದಸ್ಯರು ಹಾಜರಿದ್ದರು.

ವಿದ್ಯಾರ್ಥಿನಿಯರಾದ ದೀಪ್ತಿ ಹಾಗೂ ನೈನಾ ಹೆಗ್ಡೆ ನಿರೂಪಿಸಿದರು.

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *