

ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಾಣಿಜ್ಯ ವಿಭಾಗವು ಚಾರ್ಟರ್ಡ್ ಅಕೌಂಟೆAಟ್ ಆಗುವ ಕನಸನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಸ್ಪೂರ್ತಿಗೊಳಿಸಲು, ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಸಿ ಎ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎ ನಾಗಭೂಷಣ ಪೈ ಮಾತನಾಡಿ, ಚಾರ್ಟರ್ಡ್ ಅಕೌಂಟೆAಟ್ ವೃತ್ತಿಯಲ್ಲಿ ಯಶಸ್ವಿಯಾಗಲು ಶಿಸ್ತು , ಸಮರ್ಪಣೆ ಅಗತ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ತಮ್ಮ ಗುರಿ ಸಾಧಿಸಲು ಇಂತಹ ಸಿದ್ಧತೆ ಪ್ರೇರಣೆ ನೀಡುತ್ತದೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿಎ ಶಿವಾನಂದ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ವರವಾಗುವ,ಭದ್ರತೆಯನ್ನು ಒದಗಿಸುವ ಚಾರ್ಟೆಡ್ ಅಕೌಂಟೆAಟ್ ಓದು ವಿದ್ಯಾರ್ಥಿ ದೆಸೆಯಲ್ಲಿ ತುಂಬ ಪ್ರಯತ್ನ ಪಡಬೇಕಾಗಿ ಬಂದರೂ ಅದರ ಪರಿಣಾಮ ತುಂಬ ಅನುಕೂಲಕರವಾಗಿರುತ್ತದೆ ಎಂದರು. ಸಿ.ಎ.ಓದುವ ವಿದ್ಯಾರ್ಥಿಗಳಿಗೆ ಮೌಲ್ಯಯುತ ಮಾರ್ಗದರ್ಶನ ಮತ್ತು ಪ್ರೋತ್ಸಾಹ
ಅಗತ್ಯ ಎಂದರು.
ತಾAತ್ರಿಕ ಅಧಿವೇಶನಗಳಲ್ಲಿ, ಸಿಎ ಗಣಪತಿ ಪಿ. ಕಾಮತ್ ಮತ್ತು ಸಿಎ ಶ್ರುತಿ ಪ್ರಭು ಅವರು ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊAಡುವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸಿದರು.
ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೋಟ್ಯಾನ್ ಸ್ವಾಗತಿಸಿ, ಸಹ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ನಂದಕಿಶೋರ್ ವಂದಿಸಿದರು. ಅಂತಿಮ ಬಿ. ಕಾಂನ ಅಮೃತ ಕಾರ್ಯಕ್ರಮ ನಿರೂಪಿಸಿದರು


