Share this news

ಕಾರ್ಕಳ: ತೆಂಗು ಅಭಿವೃದ್ಧಿ ಮಂಡಳಿಯು M/s ದಿನ್ಯೂಇಂಡಿಯಾ ಅನ್ಯುರೆನ್ಸ್ ಕಂ ಲಿ. ಸಹಯೋಗದೊಂದಿಗೆ ಜಾರಿಗೆ ತಂದಿರುವ ‘ಕೇರಾ ಸುರಕ್ಷಾ ವಿಮಾ ಯೋಜನೆ” ತೆಂಗಿನಮರಹತ್ತುವವರಿಗೆ/ನೀರಾತಂತ್ರಜ್ಞರಿಗೆ/ತೆಂಗುಕೊಯ್ಲು ಮಾಡುವವರಿಗೆ ಗರಿಷ್ಠ ಏಳು ಲಕ್ಷರೂಪಾಯಿಗಳವರೆಗೆ ಆಕಸ್ಮಿಕ ವಿಮಾ ರಕ್ಷಣೆಯನ್ನುಒದಗಿಸುತ್ತದೆ. ಪ್ರಸ್ತುತ ಫಲಾನುಭವಿಯ ವಾರ್ಷಿಕ ಪ್ರೀಮಿಯಂ ಪಾಲು ರೂ. 143/- ಆಗಿದ್ದು, ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸುವವರು ಅರ್ಜಿ ಹಾಗೂ ಆಧಾರ್ ಪ್ರತಿಯೊಂದಿಗೆ ಮತ್ತು ಪ್ರಮಾಣೀಕರಣದೊಂದಿಗೆ ಅರ್ಜಿ ಗಳನ್ನು ತೆಂಗು ಅಭಿವೃದ್ಧಿ ಮಂಡಳಿ, ಕೇರಾಭವನ, ಎಸ್. ಆರ್.ವಿ.ಎಚ್.ಎಸ್ ರಸ್ತೆ, ಕೊಚ್ಚಿ-682011, ಕೇರಳಕ್ಕೆ ಸಲ್ಲಿಸಬಹುದು.

ಕೇರಾ ಸುರಕ್ಷಾ ವಿಮಾ ಯೋಜನೆಯು ಸಾಮಾನ್ಯ ಅಪಘಾತ ವಿಮಾ ಯೋಜನೆಯಾಗಿದ್ದು, ಕೆಲಸ ನಿರ್ವಹಿಸುವ ಸಮಯದಲ್ಲಿ ಮಾತ್ರವಲ್ಲದೆ ಬೇರೆ ಸಂಧರ್ಭಗಳಲ್ಲಿ ಸಂಭವಿಸುವ ಅಪಘಾತಗಳನ್ನುಒಳಗೊಂಡಿದೆ.ವಿಮಾದಾರರು ಮರಣಹೊಂದಿದಲ್ಲಿ ಅಥವಾ ಶಾಶ್ವತಪೂರ್ಣ ಅಂಗವಿಕಲರಾದಲ್ಲಿ ರೂ. 7.00 ಲಕ್ಷ, ಶಾಶ್ವತ ಭಾಗಶಃ ಅಂಗವಿಕಲರಾದಲ್ಲಿ ರೂ. 3.50 ಲಕ್ಷ, ಆಸ್ಪತ್ರೆಗೆ ದಾಖಲಾದಲ್ಲಿ ಔಷಧಿವೆಚ್ಚ ಸೇರಿದಂತೆ ವೈದ್ಯಕೀಯ ವೆಚ್ಚಗರಿಷ್ಠ ರೂ. 2.00 ಲಕ್ಷ, ಆ್ಯಂಬುಲೆನ್ಸ್ ರೂ. 3500/- , 6 ತಿಂಗಳ ನಿರ್ವಹಣಾ ವೆಚ್ಚರೂ. 21000/-, ಆಸ್ಪತ್ರೆಗೆ ದಾಖಲಾದ ಸಂಧರ್ಭಗಳಲ್ಲಿ ಸಹಚರರಿಗೆ ಗರಿಷ್ಠ ರೂ. 3000/-, ಮರಣ ಸಂಧರ್ಭದಲ್ಲಿ ಶವಸಂಸ್ಕಾರಕ್ಕಾಗಿರೂ. 5500/- ಗಳಿಗೆವಿಮೆ ರಕ್ಷಣೆ ಹೊಂದಿರುತ್ತಾರೆ.ಅಪಘಾತ ಸಂಭವಿಸಿದ ಸಂಧರ್ಭದಲ್ಲಿ ವಿಮಾದಾರರು 72 ಗಂಟೆಗಳ ಒಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಪ್ರಾಥಮಿಕ ಮಾಹಿತಿಯನ್ನು ನೀಡಬೇಕಿರುತ್ತದೆ.
ಅರ್ಜಿ ನಮೂನೆಗಳನ್ನು ತೋಟಗಾರಿಕೆ ಇಲಾಖೆ, ಗ್ರಾಮಪಂಚಾಯತ್ ಅಥವಾ ಕೃಷಿಸಖಿಯರಿಂದ ಪಡೆದುಪಂಚಾಯತ್ ಅಧ್ಯಕ್ಷರು/CPF ಪದಾಧಿಕಾರಿಗಳು/CPC ನಿರ್ದೇಶಕರುಗಳಿಂದ ಮೇಲುರುಜು ಮಾಡಿದ ಜೊತೆಗೆ ತೆಂಗು ಅಭಿವೃದ್ಧಿ ಮಂಡಳಿ ಪರವಾಗಿ ಎರ್ನಾಕುಲಂನಲ್ಲಿ ಪಾವತಿಸುವಂತೆರೂ. 143/- ರ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಪೋನ್ ಪೇ ಅಥವಾಗೂಗಲ್ ಪೇ ಅಥವಾ ನೆಫ್ಟ್ ಮತ್ತು ವಯಸ್ಸಿನ ಪುರಾವೆಗಾಗಿ ಆಧಾರ್ ಪ್ರತಿಯೊಂದಿಗೆ ತೆಂಗು ಅಭಿವೃದ್ಧಿ ಮಂಡಳಿ, ಎಸ್.ಆರ್.ವಿ.ಎಚ್.ಎಸ್ ರಸ್ತೆ, ಕೊಚ್ಚಿ-682011, ಕೇರಳಕ್ಕೆ ಕಳುಹಿಸಬಹುದು.ಅರ್ಜಿ ಮತ್ತು ಇತರೆ ವಿವರಗಳು ತೆಂಗು ಅಭಿವೃದ್ಧಿ ಮಂಡಳಿಯ ಜಾಲತಾಣ www.coconutboard.gov.inನಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ತೋಟಗಾರಿಕೆ ಇಲಾಖೆ ಅಥವಾ ತೆಂಗು ಅಭಿವೃದ್ಧಿ ಮಂಡಳಿ, ಕೊಚ್ಚಿಯ ಅಂಕಿಅಂಶ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *