Share this news

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ (ಎಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪರ್ವೀಜ್ ಷರೀಫ್ ಬಿ.ಜಿ., ಅವರು ಅಂತಾರಾಷ್ಟ್ರೀಯ ಮೈಕ್ರೋವೇವ್ ವಿಶ್ವ ನಾಯಕರ ಸಮ್ಮೇಳನ (ಐಎಂಡಬ್ಲ್ಯುಎಲ್ಸಿ) 2025 ರಲ್ಲಿ ಪಿಎಚ್ಡಿ ವಿಭಾಗದ ಅಡಿಯಲ್ಲಿ ಪ್ರತಿಷ್ಠಿತ ಮೂರು ನಿಮಿಷಗಳ ಥಿಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಕಠಿಣ ಮಾನದಂಡಗಳಿಗೆ ಹೆಸರುವಾಸಿಯಾದ ಈ ಸ್ಪರ್ಧೆಯು ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಸಂಕ್ಷಿಪ್ತ ಮತ್ತು ಆಕರ್ಷಕ ರೀತಿಯಲ್ಲಿ ಸಂಶೋಧನಾ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಗುತ್ತದೆ. ಷರೀಫ್ ಅವರ ಅತ್ಯುತ್ತಮ ಪ್ರಸ್ತುತಿ ಕೌಶಲ್ಯ, ಚಿಂತನೆಯ ಸ್ಪಷ್ಟತೆ ಮತ್ತು ಸಂಶೋಧನಾ ಕಲ್ಪನೆಯನ್ನು ಪರಿಣಾಮಕಾರಿಯಾಗಿ ಸಂವಹನ ಮಾಡುವ ಸಾಮರ್ಥ್ಯಕ್ಕಾಗಿ ಗುರುತಿಸಲಾಗಿದೆ. ಐಇಇ, ಎಂಟಿಟಿ-ಎಸ್, ಎಪಿಎಸ್ ಸೊಸೈಟಿಗಳು, ಐಇಇಇ ಕೇರಳ, ಐಇಇಇ ಬೆಂಗಳೂರು ವಿಭಾಗ ಮತ್ತು ಎಇಎ???ಸ್ ಬೆಂಗಳೂರು ಚಾಪ್ಟರ್ ನಡಿಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಮೈಕ್ರೊವೇವ್ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖ ಸಂಶೋಧಕರು ಮತ್ತು ವೃತ್ತಿಪರರನ್ನು ಭಾಗವಹಿಸುವಂತಹ ವೇದಿಕೆಯಾಯಿತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *