ಹೆಬ್ರಿ, ಸೆಪ್ಟೆಂಬರ್ 18: ಹೆಬ್ರಿ ಪಿ ಆರ್ ಎನ್ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಮಾಹಿತಿ ಕಾರ್ಯಾಗಾರವನ್ನು ಚಾಣಕ್ಯ ಸಂಸ್ಥೆ ಹೆಬ್ರಿ ಸಂಸ್ಥಾಪಕರು , ಉದಯವಾಣಿ ದಿನಪತ್ರಿಕೆಯ ಪತ್ರಕರ್ತರು ಉದಯ್ ಕುಮಾರ್ ಶೆಟ್ಟಿ ಹೆಬ್ರಿ ನಡೆಸಿಕೊಟ್ಟರು.
ಪತ್ರಿಕೋದ್ಯಮದಲ್ಲಿ ಇಂದು ಇರುವ ವಿಫುಲ ಅವಕಾಶಗಳ ಬಗ್ಗೆ, ಸುದ್ದಿ ಮನೆಯ ಕಾರ್ಯವೈಖರಿಯ ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಅಮೃತ ಭಾರತಿ ವಿದ್ಯಾಲಯದ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಂಗ್ಲಭಾಷಾ ಸಾವಿತ್ರಿ ಕಿಣಿ, ವಿಜ್ಞಾನ ಶಿಕ್ಷಕಿ ನವ್ಯಾ ಪೈ ಉಪಸ್ಥಿತರಿದ್ದರು. ಸಂಸ್ಥೆಯ ಉಪಮುಖ್ಯೋಪಾಧ್ಯಾಯರು ಮಹೇಶ್ ಹೈಕಾಡಿ ಸ್ವಾಗತಿಸಿ,ವಿಜ್ಞಾನ ಶಿಕ್ಷಕಿ ಸೌಪರ್ಣಿಕಾ ಜೋಷಿ ವಂದಿಸಿದರು.