ಕಾರ್ಕಳ, ಸೆ.22: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನ ಕಾರ್ಕಳ ವಲಯದ 2025-27 ರ ನೂತನ ಅಧ್ಯಕ್ಷರಾಗಿ ಮುನಿಯಾಲಿನ ಪ್ರಮೋದ್ ಚಂದ್ರ ಪೈ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಹಾಗೂ ಸಂಘದ ಪದಾಧಿಕಾರಿಗಳಲ್ಲಿ, ಗೌರವಾಧ್ಯಕ್ಷರಾಗಿ ಟಿ. ವಿ. ಸುಶೀಲ್ ಕುಮಾರ್,ಉಪಾಧ್ಯಕ್ಷರಾಗಿ ಪ್ರಕಾಶ್ ಪ್ರಭು ಮೂರೂರು, ಕಾರ್ಯದರ್ಶಿಯಾಗಿ ಶೇಖರ್ ಹನಿ ಕುಕ್ಕುಜೆ, ಜೊತೆ ಕಾರ್ಯದರ್ಶಿಯಾಗಿ ಸುಜಿತ್ ಅಂಚನ್ ಬಜಗೋಳಿ, ಕೋಶಾಧಿಕಾರಿಯಾಗಿ ವಿ. ಆರ್. ಸತೀಶ್ ಆಚಾರ್ಯ ವರಂಗ, ಕ್ರೀಡಾ ಕಾರ್ಯದರ್ಶಿಗಳಾಗಿ ಸುಶಾಂತ್ ಕಿಯಾರ ಕಾರ್ಕಳ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ ಸಾಣೂರು,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಸನ್ನ ಐಸಿರ ಕುಕ್ಕುಂದೂರು, ಸಂಘಟನಾ ಕಾರ್ಯದರ್ಶಿಯಾಗಿ ಪ್ರಣಮ್ ಜೈನ್,ಛಾಯಾ ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಕಾರ್ಕಳ,ಮಾಧ್ಯಮ ಪ್ರತಿನಿಧಿಯಾಗಿ ಸತೀಶ್ ಹೆಗ್ಡೆ ಕಡ್ತಲ ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಕಮಲಾಕ್ಷ ಪ್ರಭು ಕಾಡುಹೊಳೆ,ವಿಜಯ್ ಹನಿ ಕುಕ್ಕುಜೆ, ಪ್ರಶಾಂತ್ ಬಜಗೋಳಿ, ಹರೀಶ್ ಓಂಕಾರ್ ಬಜಗೋಳಿ, ವಿಠ್ಠಲ್ ಅಮೀನ್ ಕಾರ್ಕಳ, ಸುದರ್ಶನ್ ಸಾಣೂರು, ಸೀತಾರಾಮ್ ಸಾಣೂರು, ಸುರೇಶ ಪಂಚಮಿ ಬಜಗೋಳಿ ಹಾಗೂ ಸುಭಾಸ್ ಬಜಗೋಳಿ ಆಯ್ಕೆ ಆಯ್ಕೆಯಾಗಿದ್ದಾರೆ.