

ಕಾರ್ಕಳ: ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಕುಂದಾಪುರ ತಾಲೂಕು ಇಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕಾರ್ಕಳದ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿದೆ.
ತಂಡದ ಮೂರು ವಿದ್ಯಾರ್ಥಿನಿಯರಾದ ಮೇಘನಾ ದ್ವಿತೀಯ ವಾಣಿಜ್ಯ ವಿಭಾಗ, ಮಂಜುಳಾ ದ್ವಿತೀಯ ಕಲಾ ವಿಭಾಗ ಹಾಗೂ ಪಂಚಮಿ ದ್ವಿತೀಯ ವಾಣಿಜ್ಯ ವಿಭಾಗ ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜೇತ ತಂಡಕ್ಕೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು , ಹಿರಿಯ ಸಹ ಶಿಕ್ಷಕರು, ಬೋಧಕ ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.


