

ಹೆಬ್ರಿ,ಸೆ,28: ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ದಂಪತಿ ಗಾಯಗೊಂಡ ಘಟನೆ ಹೆಬ್ರಿಯಲ್ಲಿ ಸಂಭವಿಸಿದೆ.
ಕಾರು ಚಾಲಕವಿಜೇಶ್ ಹಾಗೂ ಅವರ ಪತ್ನಿ ನಿಶಾ ಗಾಯಗೊಂಡಿದ್ದು, ವಿಜೇಶ್ ತನ್ನ ಪತ್ನಿ ನಿಶಾ ಅವರೊಂದಿಗೆ ತನ್ನ ಕಾರಿನಲ್ಲಿ ಶುಕ್ರವಾರ ರಾತ್ರಿ 8.30ರ ಸಮಾರಿಗೆ ಹೆಬ್ರಿ ಹುತ್ತುರ್ಕೆ ಸಮೀಪದ ದೇವಿ ಪ್ರಸಾದ ಎನ್’ಕ್ಲೇವ್ ಗೆ ಹೋಗುವ ಸಂದರ್ಭದಲ್ಲಿ ಎದುರುಗಡೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಿಶಾ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಅವರ ಪತಿ ವಿಜೇಶ್ ರವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು ಮತ್ತು ಪಕ್ಕೆಲುಬಿನ ಮೂಳೆ ಮುರಿತವಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


