Share this news

ಕಾರ್ಕಳ: ತೋಟಗಾರಿಕೆ ಇಲಾಖೆ ವತಿಯಿಂದ 2 ದಿನಗಳ ಪ್ರಾಯೋಗಿಕ ಜೇನು ಕೃಷಿ ಉಚಿತ ತರಬೇತಿಯನ್ನು ಅಕ್ಟೋಬರ್ 6 ಹಾಗೂ 7 ರಂದು ಕಾರ್ಕಳ ಜೋಡುರಸ್ತೆ ದುರ್ಗಾ ಹೈಸ್ಕೂಲ್‍ ಬಳಿಯಿರುವ ಮಧುವನ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ತರಬೇತಿ ಪಡೆದ ರೈತರಿಗೆ ಶೇ. 75ರ ಸಹಾಯಧನದಲ್ಲಿ ಕುಟುಂಬ ಸಹಿತ ಜೇನು ಪೆಟ್ಟಿಗೆ ಪಡೆಯಲು ಅವಕಾಶವಿರುತ್ತದೆ. ಕೃಷಿ ಜಮೀನು ಹೊಂದಿರದ ಜೇನು ಕೃಷಿ ಆಸಕ್ತರು ಕೂಡ ತರಬೇತಿ ಹಾಗೂ ಸಹಾಯಧನ ಪಡೆಯಲು ಅವಕಾಶವಿದೆ. ಆಸಕ್ತರು ತಮ್ಮ ಆಧಾರ್, ಬ್ಯಾಂಕ್ ಖಾತೆ ಪ್ರತಿ, ಪಹಣಿ ಪತ್ರದ ಪ್ರತಿ (ಕಡ್ಡಾಯವಲ್ಲ)ಯೊಂದಿಗೆ ಅ.6 ರಂದು ಬೆಳಿಗ್ಗೆ 9:30ಕ್ಕೆ ತರಬೇತಿಗೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿ ಹಾಗೂ ತರಬೇತಿಗೆ ನೋಂದಣಿಯಾಗುವ ಕುರಿತು ಯತಿರಾಜ್ ಶೆಟ್ಟಿ :9972425333 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ಕಾರ್ಕಳ ತೋಟಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *