ಹೆಬ್ರಿ : ಇಲ್ಲಿನ ಬೈಲುಮನೆ ಶ್ರೀ ರಾಘವೇಂದ್ರ ಮಠದ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ಮಹಾ ಚಂಡಿಕಾಯಾಗವು ಪ್ರಧಾನ ಅರ್ಚಕ ವೇದಮೂರ್ತಿ ಎಚ್ ಗೋಪಾಲ ಆಚಾರ್ಯ ಇವರ ನೇತೃತ್ವದಲ್ಲಿ ಸೆ.30 ರಂದು ನಡೆಯಿತು.
ದೇವಿಗೆ ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಮಹಾಪೂಜೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಭಜನೆ, ಸಾರ್ವಜನಿಕ ಅನ್ನಸಂತರ್ಪಣೆಯು ಶ್ರೀ ಮಠದ ವ್ಯವಸ್ಥಾಪಕ ವೆಂಕಟೇಶ ಆಚಾರ್ಯ ಇವರ ಸಹಕಾರದೊಂದಿಗೆ ನಡೆಯಿತು.