

ಕಾರ್ಕಳ:ತಾಲೂಕಿನ ರೆಂಜಾಳ ಗ್ರಾಮದ ಪಾಜಲು ದರ್ಖಾಸು ನಿವಾಸಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.
ರೆಂಜಾಳದ ಜಗದೀಶ ಶೆಟ್ಟಿ (33 ವರ್ಷ) ನಾಪತ್ತೆಯಾದವರು. ಅವರು ಕಳೆದ 5-6 ವರ್ಷಗಳಿಂದ ವಿಪರೀತ ಕುಡಿತದ ಚಟ ಹೊಂದಿದ್ದು, ಚಿಕಿತ್ಸೆ ಮಾಡಿಸಿದರೂ ಕುಡಿತ ಮುಂದುವರೆಸಿದ್ದರು. ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಅವರು ಕಳೆದ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದರು. ಸೆ. 25ರಂದು ಬೆಳಗ್ಗಿನ ಜಾವ ಮನೆಯಲ್ಲಿ ಸುತ್ತಾಡುತ್ತಿದ್ದ ಜಗದೀಶ್ ಶೆಟ್ಟಿ ಬೆಳಿಗ್ಗೆ ನೋಡಿದಾಗ ಮನೆಯಲ್ಲಿ ಇಲ್ಲದೇ, ಈವರೆಗೂ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


