ಕಾರ್ಕಳ: ನೀರೆ ಗ್ರಾಮದ ಕಂಪನ್ ಎಂಬಲ್ಲಿ ಪಾದಾಚಾರಿ ವ್ಯಕ್ತಿಗೆ ಟೆಂಪೊ ಡಿಕ್ಕಿಯಾಗಿ ಪಾದಾಚಾರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಕ್ಕುಂದೂರು ಗ್ರಾಮದ ಜಾರ್ಕಳ ಶಾಂತಿಪಲ್ಕೆ ನಿವಾಸಿ ಆನಂದ (55ವ) ಗಾಯಗೊಂಡವರು.
ಆನಂದ ಅವರು ಅ. 6 ರಂದು ನೀರೆ ಗ್ರಾಮದ ಕಂಪನ್ ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಟೆಂಪೊ ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ವೇಳೆ ಆನಂದರಿಗೆ ಢಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಆನಂದ ಅವರು ಕೆಳಕ್ಕೆ ಬಿದ್ದಾಗ ಅವರ ಕಾಲಿನ ಮೇಲೆ ಟೆಂಪೊ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.