ಕಾರ್ಕಳ: ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆಗೆ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಎಸ್ ಡಿ ಎಂ ಸಿ ಮತ್ತು ಶಾಲಾ ಪ್ರಶಸ್ತಿಯನ್ನು ಜಿಲ್ಲಾ ನ್ಯಾಯಾಧೀಶರು ಪ್ರದಾನ ಮಾಡಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿ ನಾಯಕ ಮತ್ತು ಶಾಲಾ ಎಸ್ ಡಿ ಎಂ ಸಿ ತಂಡ ಹಾಜರಿದ್ದರು.
ಇದು ಶಾಲೆಗೆ ವಿವಿಧ ರೀತಿಯ ಅನುದಾನಗಳನ್ನು ತಂದುಕೊಟ್ಟ ಶಾಸಕ ವಿ.ಸುನಿಲ್ ಕುಮಾರ್,ಎಲ್ಲಾ ದಾನಿಗಳು, ನಿಕಟಪೂರ್ವ ಮುಖ್ಯೋಪಾಧ್ಯಾಯಿನಿ ಹರ್ಷಿಣಿ , ನಿಕಟಪೂರ್ವ ಎಸ್‌ಡಿಎಂಸಿ ಅಧ್ಯಕ್ಷರಾದ ವಿಜಯರಾಜ್ ಶೆಟ್ಟಿ ಮತ್ತು ಅವರ ತಂಡಕ್ಕೆ ಸಂದ ಗೌರವವಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರು, ಪುರಸಭಾ ಸದಸ್ಯರು, ಎಲ್ಲಾ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ದೈಹಿಕ ಶಿಕ್ಷಕರು ಸಂಗೀತ ಶಿಕ್ಷಕರು , ಎಲ್ಲಾ ಹಳೆ ವಿದ್ಯಾರ್ಥಿಗಳು ಹಾಗೂ ಹಾಲಿ ಎಸ್ ಡಿ ಎಮ್ ಸಿ ತಂಡದವರಿಗೆ ಶಾಲಾ ಮಕ್ಕಳು ಮತ್ತು ಮಕ್ಕಳ ಪಾಲಕರು ಅಧ್ಯಕ್ಷರು ಆನಂದ್ರಾಯ ನಾಯಕ್, ಉಪಾಧ್ಯಕ್ಷರಾದ ವೀಣಾ ಭಂಡಾರಿ ಹಾಗೂ ಮುಖ್ಯೋಪಾಧ್ಯಾಯರಾದ ದಿವಾಕರ ಅಭಿನಂದನೆ ಸಲ್ಲಿಸಿದ್ದಾರೆ.