ಕಾರ್ಕಳ, ಅ,13: ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ ಅವರ ಸಾವು ನಿಜಕ್ಕೂ ಆಘಾತಕಾರಿ ಹಾಗೂ ದುರದೃಷ್ಟಕರ ವಿಚಾರವಾಗಿದೆ. ಉತ್ತಮ ನಡವಳಿಕೆಯ ಯುವಕ ಕೆಟ್ಟ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರದ ಸಂಗತಿ. ಕುಟುಂಬದ ಜವಾಬ್ದಾರಿ ಹೊರಬೇಕಿದ್ದ ಮಗನ ಸಾವಿಗೆ ಕುಟುಂಬ ಕಣ್ಣೀರು ಹಾಕುತ್ತಿದೆ. ಅಭಿಷೇಕ್ ಆಚಾರ್ಯ ಸಾವಿಗೆ ನಿಖರವಾದ ಕಾರಣ ಹುಡುಕಿ ಇದರ ಹಿಂದಿರುವ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸುವುದಾಗಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ.