ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ದೇಂದಬೆಟ್ಟು ಎಂಬಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಕೋಟ್ಯಾಂತರ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಿಯ್ಯಾರಿನ ಸತ್ಯೇಂದ್ರ ನಾಯಕ್, ಶ್ರೀಕಾಂತ್ ನಾಯಕ್ ಹಾಗೂ ರಮಾನಂದ ನಾಯಕ್ ಎಂಬವರು ಮಿಯ್ಯಾರು ಗ್ರಾಮದ ದೇಂದಬೆಟ್ಟು ಎಂಬಲ್ಲಿ ಆರೋಪಿ ಸತ್ಯೇಂದ್ರ ನಾಯಕ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸುಡುಮದ್ದುಗಳನ್ನು (ಪಟಾಕಿ) ಸಂಗ್ರಹಿಸಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅಕ್ಟೊಬರ್16 ರಂದು ಕಾರ್ಕಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕರಾದ (ಕಾ.ಸು &, ಸಂಚಾರ ) ಮುರಳೀಧರ ನಾಯ್ಕ್ ಅವರು ಸಿಬ್ಬಂದಿ, ಕಾರ್ಮಿಕರು ಮತ್ತು ತಜ್ಞ ತಂಡದೊಂದಿಗೆ ನ್ಯಾಯಾಲಯದಿಂದ ಅನುಮತಿ ಪಡೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನಿರಿಸಿದ್ದ ರೂ. 1,34,05,266 ಮೌಲ್ಯದ ವಿವಿಧ ಕಂಪೆನಿಯ ಸೇರಿದಿ ವಿವಿಧ ಬಗೆಯ ಸುಡುಮದ್ದುಗಳನ್ನು (ಪಟಾಕಿ) ಗಳನ್ನು ವಶಪಡಿಸಿಕೊಂಡು ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.