ಕಾರ್ಕಳ: ತಾಲೂಕಿನ ಮಾಳ ಗ್ರಾಮದ ಕೂಡಬೆಟ್ಟು ಬಳಿ ವನಿತಾ ಎಂಬವರ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಸಮಸ್ಯೆ ಉಂಟಾಗಿತ್ತು. ಇದನ್ನು ಶಾಕಸ ವಿ. ಸುನಿಲ್ ಕುಮಾರ್ ಅವರ ಗಮನಕ್ಕೆ ತಂದಾಗ ಅವರು ತಕ್ಷಣ ಸ್ಪಂದಿಸಿದ್ದು, ಶಾಸಕರು ಹಾಗೂ ಬೆಂಗಳೂರಿನ ಉದ್ಯಮಿಯೊಬ್ಬರ ಸಹಕಾರದಿಂದ ಆ ಮನೆಗೆ ಇನ್ವರ್ಟರ್ ಸಿಸ್ಟಂ ಅಳವಡಿಸಲಾಯಿತು.
ಭಾನುವಾರ ಸಂಜೆ ಶಾಸಕರು ದೇವರ ದೀಪದ ಸ್ವಿಚ್ ಹಾಕುವ ಮೂಲಕ ಸೋಲಾರ್ ಸಿಸ್ಟಂ ಅನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಡಾ. ಸತ್ಯನಾರಾಯಣ ಭಟ್, ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ, ಉಪಾಧ್ಯಕ್ಷೆ ವಿಮಲಾ ಪೂಜಾರಿ, ಮನೆಯ ಸದಸ್ಯರು, ಪಂಚಾಯತ್ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ದಾನಿಗಳನ್ನು ಸಂಪರ್ಕಿಸಿ ಸೋಲಾರ್ ಸೌಲಭ್ಯ ಕಲ್ಪಿಸುವಲ್ಲಿ ಮುತುವರ್ಜಿವಹಿಸಿದ ರಾಜೇಶ್ ನಾಯ್ಕ್ ಮಾಳ ಸ್ವಾಗತಿಸಿ, ಸುಧಾಕರ ಡೋಂಗ್ರೆ ವಂದಿಸಿದರು.