Share this news

 

ಉಡುಪಿ : ನಿರಂತರವಾಗಿ 6 ವರ್ಷಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಐದು ದಿನಗಳ ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ. ಶ್ರೀ ಕೃಷ್ಣನ ಕುರಿತಾದ ಯಕ್ಷಾರ್ಚನೆಯನ್ನು ಹಟ್ಟಿಯಂಗಡಿ ಮೇಳದವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು .

ಅವರು ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶೀಪಾದರ ಶುಭಾಶೀರ್ವಾದದೊಂದಿಗೆ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲೆ, ದ್ಯುತಿ ಪರ್ವ ಯಕ್ಷ ಟ್ರಸ್ಟ್, ಕುಂದಾಪುರ ಇವರ ಸಹಕಾರದಿಂದ ರಾಜಾಂಗಣದಲ್ಲಿ ನಡೆಯುತ್ತಿರುವ ಐದು ದಿನಗಳ, “ಯಕ್ಷ ಪಂಚಮಿ” ಯನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಪುತ್ತಿಗೆ ಮಠದ ಸಾಂಸ್ಕೃತಿಕ ವ್ಯವಸ್ಥಾಪಕರಾದ ಶ್ರೀ ರಮೇಶ್ ಭಟ್ ಮುಖ್ಯ ಅತಿಥಿ ಯಾಗಿ ಆಗಮಿಸಿ ” ಸಹಜ ನಿಸ್ವಾರ್ಥ ಸೇವಾ ರೂಪದಲ್ಲಿ ಏಳು ವರ್ಷಗಳ ನಿರಂತರ ಸೇವೆ ನಿಜವಾಗಿ ಶ್ರೀ ಕೃಷ್ಣನ ಆರಾಧನೆಯಾಗಿದೆ ಇದು ಕೃಷ್ಣ ನಿಗೆ ಪ್ರಿಯವಾದುದರಿಂದ ಮೇಳಕ್ಕೆ ವರ್ಷದೊಂದ ವರ್ಷಕ್ಕೆ ಪ್ರಗತಿಯೂ ಲಭಿಸಿದೆ” ಎಂದು ಹೇಳಿದರು.

ಹಟ್ಟಿಯಂಗಡಿ ಮೇಳದ ಯಜಮಾನರಾದ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ಮಾತನಾಡಿ, ಡಾ. ತಲ್ಲೂರು ಶಿವರಾಮ ಶೆಟ್ಟಿ ಯವರು ಆರಂಭಿಸಿದಂದಿನಿಂದ ಇಂದಿನವರೆಗೂ ಬಹಳ ಸಂತೋಷದಿಂದ ಯಕ್ಷ ಪಂಚಮಿಯನ್ನು ಕಲಾವಿದರೂ ಆಚರಿಸಿಕೊಂಡು ಬರುತ್ತಿದ್ದಾರೆ. ಶ್ರೀ ಕೃಷ್ಣನ ಕೃಪೆಯಿಂದ ಇದು ಹೀಗೆಯೇ ನಿರಂತರವಾಗಲೆಂದು ಪ್ರಾರ್ಥಿಸುತ್ತೇವೆ ಎಂದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *