
ಕಾರ್ಕಳ, ಅ. 27: ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈನ್ ಇದರ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ ಅ. 27 ರಂದು ನಡೆಯಿತು.
ಕೌಡೂರು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್ ಸುಧೀರ್ ಹೆಗ್ಡೆ ನಾಯರ್ ಬೆಟ್ಟು ನೂತನ ಸಂಘವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜ್ಞಾನಸುಧಾ ಕಾಲೇಜಿನ ಪ್ರಾಂಶುಪಾಲ ದಿನೇಶ್ ಕೊಡವೂರು, ಪ್ರಸನ್ನ ಹೆಗ್ಡೆ ಕೌಡೂರು,
ಕೌಡೂರು ಹರಿಜೀವನ ಹೆಗ್ಡೆ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೌಡೂರು ವಸಂತಶೆಟ್ಟಿ, ನಿವೃತ ಯೋಧ ಸಹದೇವ ನಾಯಕ್,ಉದ್ಯಮಿ ಮಂಜುನಾಥ್ ಶೆಣಿ ಬೈಲೂರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸುದೇವ ಶೆಟ್ಟಿಗಾರ್,ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಆಶಾ ಭಾನು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.






