
ಕಾರ್ಕಳ, ನ,13: ಕಳೆದ ಒಂದು ವಾರದಿಂದ ಕಾರ್ತಿಕ ಮಾಸದಲ್ಲಿ ಮಾಗಿಯ ಚಳಿ ಆರಂಭವಾದ ಬೆನ್ನಲ್ಲೇ ಇದೀಗ ಮತ್ತೆ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು. ಇಂದು ಸಂಜೆ 5 ಗಂಟೆಯ ವೇಳೆಗೆ ಕಾರ್ಕಳ ಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಅರ್ಧತಾಸು ಭಾರೀ ಮಳೆಯಾಗಿದೆ.
ಈ ಅಕಾಲಿಕ ಮಳೆಯಿಂದ ಭತ್ತದ ಕಟಾವು ಮಾಡಿದ ರೈತರು ಹಾಗೂ ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದಿಟ್ಟಿದೆ.ಪ್ರಮುಖವಾಗಿ ಸಾಕಷ್ಟು ಪ್ರಮಾಣದ ಚಳಿ ಇದ್ದಲ್ಲಿ ಅಡಿಕೆ ಹಿಂಗಾರ, ಹಣ್ಣಿನ ಹೂವು ಬಿಡಲು ಅನುಕೂಲವಾಗುತ್ತದೆ ಆದರೆ ಈ ಅಕಾಲಿಕ ಮಳೆ ಮಾರಕವಾಗಿ ಪರಿಣಮಿಸಿದೆ.

