
ಕಾರ್ಕಳ, ನ,14: ಮೊಬೈಲ್ ತೆಗೆಸಿ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ತಾಯಿ ಜೊತೆ ಜಗಳವಾಡಿ ವಿದ್ಯಾರ್ಥಿಯೋರ್ವ ಮನೆಬಿಟ್ಟು ಕಲ್ಲಿನಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ.
ಮಿಯ್ಯಾರು ಗ್ರಾಮದ ಸುರೇಖಾ ಎಂಬವರ ಪುತ್ರ ಸುಮಂತ್ ದೇವಾಡಿಗ(16) ಎಂಬಾತ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಿಟ್ಟೆ ಕಾಲೇಜಿನಲ್ಲಿ ಮೊದಲನೇ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಮಂತ್ ನ.12ರಂದು ಬುಧವಾರ ಸಂಜೆ ತನ್ನ ತಾಯಿ ಸುರೇಖಾರವರ ಬಳಿ ತನಗೆ ಹೊಸ ಮೊಬೈಲ್ ತೆಗೆಸಿಕೊಡುವಂತೆ ಹಠ ಹಿಡಿದ್ದಿದ್ದ. ಆದರೆ ತಾಯಿ ಮೊಬೈಲ್ ಕೊಡಿಸಲು ನಿರಾಕರಿಸಿದಾದ ಜಗಳ ಮಾಡಿ ಮನೆ ಬಿಟ್ಟು ಹೋಗಿದ್ದು ಆತನನ್ನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಇದೇ ಸಿಟ್ಟಿನಲ್ಲಿ ಸುಮಂತ್ ನಂದಳಿಕೆ ಗ್ರಾಮದ ಕೊಡ್ಸರಬೆಟ್ಟು ಎಂಬಲ್ಲಿ ಸೂರ್ಯಕಾಂತ ಶೆಟ್ಟಿ ಎಂಬುವವರ ಜಾಗದಲ್ಲಿರುವ ಕಲ್ಲಿನ ಕೋರೆಯಲ್ಲಿ ನಿಂತ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇವಲ ಮೊಬೈಲ್ ತೆಗೆಸಿಕೊಡಲಿಲ್ಲ ಎನ್ನುವ ಸಣ್ಣ ಕಾರಣಕ್ಕೆ ಮನನೊಂದು ಮಕ್ಕಳು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ ಎಂದರೆ ಇಂದಿನ ಮಕ್ಕಳಲ್ಲಿ ನೈತಿಕ ಶಿಕ್ಷಣದ ಕೊರತೆ, ಬದುಕಿನ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ.

