
ಕಾರ್ಕಳ, ನ,14: ಹಿಟಾಚಿ, ಜೆಸಿಬಿ,ಟಿಪ್ಪರ್ ಸೇರಿದಂತೆ ಘನವಾಹನಗಳ ರಿಪೇರಿ ಮಾಡುವ ಗ್ಯಾರೇಜಿನಲ್ಲಿ ಜೆಸಿಬಿ ಮಾಡಿರುವ ತಪ್ಪಿಗೆ ಜೆಸಿಬಿಯ ಕಬ್ಬಿಣದ ಬಕೆಟ್ ಬಡಿದು ಗ್ಯಾರೇಜ್ ಮೆಕ್ಯಾನಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉತ್ತರ ಭಾರತ ಮೂಲದ ಚಿಂಟು ಚೌಹಾಣ್(26) ಎಂಬವರು ಮೃತಪಟ್ಟ ಯುವಕ. ಚಿಂಟು ಚೌಹಾಣ್ ಕಾರ್ಕಳ ತಾಲೂಕಿನ ಮಿಯ್ಯಾರು ಕೈಗಾರಿಕಾ ಪ್ರದೇಶದಲ್ಲಿರುವ ಲವೀನಾ ಪ್ರಮೀಳಾ ಡಿ’ಮೆಲ್ಲೊ ಅವರ ಮಾಲೀಕತ್ವದ ವಿಶ್ವಾಸ್ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು. ಗುರುವಾರ ಮಧ್ಯಾಹ್ನ ಜೆಸಿಬಿಯೊಂದನ್ನು ರಿಪೇರಿ ಮಾಡುತ್ತಿದ್ದಾಗ ಅದರ ಆಪರೇಟರ್ ಸಾಗರ್ ಎಂಬಾತ ಜೆಸಿಬಿಯ ಕಬ್ಬಿಣದ ಬಕೆಟನ್ನು ಏಕಾಎಕಿ ಕೆಳಗೆ ಇಳಿಸಿದ ಪರಿಣಾಮ ಚಿಂಟು ಚೌಹಾಣ್ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗ್ಯಾರೇಜ್ ಮಾಲಕಿ ಲವೀನಾ ಪ್ರಮೀಳಾ ಡಿ’ಮೆಲ್ಲೊ ರವರು ತನ್ನ ಗ್ಯಾರೇಜಿನ ಕಾರ್ಮಿಕರ ಸುರಕ್ಷತೆಗೆ ಯಾವುದೇ ಕ್ರಮ ವಹಿಸದೇ ನಿರ್ಲಕ್ಷö್ಯ ತೋರಿರುವ ಹಿನ್ನಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

