Share this news

ಕಾರ್ಕಳ: ಮಕ್ಕಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಿರ್ಮಲವಾಗಿ ನಡೆಸಿಕೊಂಡು ಹೋಗುತ್ತಿರುವ ಇಲ್ಲಿನ ವ್ಯವಸ್ಥೆ ತುಂಬಾ ಖುಷಿ ನೀಡುತ್ತಿದೆ. ಯಾವುದೇ ವ್ಯವಸ್ಥೆಯನ್ನು ಕಲ್ಪಿಸಬಹುದು ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ. ಅದು ಇಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಶಿಕ್ಷಣ ಮಗುವಿನ ಮನಸ್ಸನ್ನು ವಿಕಾಸ ಗೊಳಿಸುವ ದೊಡ್ಡ ಅಸ್ತ್ರ .ಅದರ ಎದುರು ಬೇರೆ ಯಾವ ಅಸ್ತ್ರವೂ ಇಲ್ಲ ಎಂದು ಕಾರ್ಕಳದ ಹಿರಿಯ ಸಾಹಿತಿ ಜ್ಯೋತಿ ಗುರುಪ್ರಸಾದ್ ಹೇಳಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ ಮೈನ್ ಇಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಲ್ಲಿ ದೂರದ ಊರಿನಿಂದ ಕಾರ್ಮಿಕರಾಗಿ, ಶ್ರಮಿಕರಾಗಿ ವಲಸೆ ಬಂದಿರುವ ಪೋಷಕರ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿದ್ದು ನೆಮ್ಮದಿಯಿಂದ ಓದುತ್ತಿರುವುದು ಸಂತೋಷದಾಯಕವಾಗಿದೆ. ಹೂವಿನಂಥ, ಬೆಳಕಿನಂಥ ಮಕ್ಕಳು. ಯಾವುದೇ ಕಾರಣಕ್ಕೂ ಅನಾಥ ಪ್ರಜ್ಞೆ ಅನುಭವಿಸದಂತೆ ಶಿಕ್ಷಕರು ಹಾಗೂ ಪೋಷಕರು ಅವರನ್ನು ಮಮತೆಯಿಂದ ಕಾಪಿಡಬೇಕೆಂಬುದು ನನ್ನ ಹೃದಯದ ಮಾತು. ಅದು ಇಲ್ಲಿ , ಇಲ್ಲಿನ ವ್ಯವಸ್ಥೆಯಲ್ಲಿ ಸುಗಮವಾಗಿ ಸಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಮಾಲಾಶ್ರೀ, ಶಿಕ್ಷಕರಾದ ಶಿವಾನಂದ, ಅಶ್ವಿನಿ, ವಾಣಿ , ಶಾಲಾ ವಿದ್ಯಾರ್ಥಿ ನಾಯಕ ಮೊಹಮ್ಮದ್ ತೌಸಿಫ್ ಹಾಗೂ ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಗೆ ಧ್ವನಿವರ್ಧಕದ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಕೊಡುಗೈ ದಾನಿಗಳಾದ ಜ್ಯೋತಿ ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಪುರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಸುಮಾ ಕೇಶವ್ ವಹಿಸಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಮಧುಶ್ರೀ ವಂದಿಸಿದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ ನಿರೂಪಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *