
ಹೆಬ್ರಿ: ಶಿವಪುರ ಕುಲಾಲ ಸಂಘದ 10ನೇ ವರ್ಷದ ವಾರ್ಷಿಕ ಮಹಾ ಸಮಾವೇಶ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ನವೆಂಬರ್ 16 ರಂದು ಮುಳ್ಳುಗುಡ್ದೆ ಶಾಲಾ ಸಭಾ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ವಾಸುದೇವ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ವಿಜ್ಞಾನಿ ಡಾ| ಆನಂದ ಕುಲಾಲ್ ಪಟ್ಣ (ನಿರ್ದೇಶಕರು (ಪ್ರಭಾರ), ಪೂರ್ಣಪ್ರಜ್ಞ ಸಂಶೋಧನಾ ಕೇಂದ್ರ, ಬೆಂಗಳೂರು), PWD ಕಾಂಟ್ರಾಕ್ಟರ್ ಕ್ಲಾಸ್ I ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜೀವ್ ಕುಲಾಲ್, ಬೆಪ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಕಾಳುಕುಲಾಲ್,ಕಾರ್ಕಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್, ಹೆಬ್ರಿ ಕುಲಾಲ ಸಂಘದ ಅಧ್ಯಕ್ಷ ಸುರೇಂದ್ರ ಕುಲಾಲ್ , ಕುಲಾಲ ಸಮಾಜದ ಹಿರಿಯರಾದ ಐತು ಕುಲಾಲ್ ಕನ್ಸಾನ, ಗೌರವ ಅಧ್ಯಕ್ಷರಾದ ಉದಯ ಕುಲಾಲ್, ಕಾರ್ಯದರ್ಶಿ ಮಣಿಕಂಠ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷರಾದ ಸುನಂದಾ ಕುಲಾಲ್ ಉಪಸ್ಥಿತ ರಿದ್ದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಶ್ರೀಮತಿ ಬಾಗಿ ಕುಲಾಲ್ ಮೂರ್ಸಾಲು, ಕಂಬಳ ಕ್ಷೇತ್ರ ಮತ್ತು ಕೃಷಿಯಲ್ಲಿ ಸಾಧನೆ ಮಾಡಿದ ಮಂಜುನಾಥ್ ಕುಲಾಲ್ ಯಳಗೋಳಿ, ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ ಟಾಪರ್ ಆಗಿರುವ ಕು. ಸಮೃದ್ಧಿ ಸತೀಶ ಕುಲಾಲ್, ಗುಜ್ಜಿಬೆಟ್ಟು ,ಕ್ರೀಡಾ ಕ್ಷೇತ್ರದಲ್ಲಿನ ಸಾಧಕ, ಜೂನಿಯರ್ ನ್ಯಾಷನಲ್ ಕಬಡ್ಡಿ ಆಟಗಾರರಾದ ಸುಕೇಶ್ ಕುಲಾಲ್, ಮಾಳ ಬಜಗೋಳಿ ಅವರನ್ನು ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಶೈಕ್ಷಣಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.ಶಿವಪುರ ಗ್ರಾಮದ ಅರ್ಹ ಫಲಾನುಭವಿಗಳಿಗೆ ಅಗತ್ಯ ವೈದ್ಯಕೀಯ ನೆರವನ್ನು ವಿತರಿಸಲಾಯಿತು.
ಜಗನ್ನಾಥ ಕುಲಾಲ್ ಸ್ವಾಗತಿಸಿ, ಗಣೇಶ ಹಾಂಡ ಪ್ರಸ್ತಾವನೆಗೈದರು. ಅಧ್ಯಾಪಕ ಮಂಜುನಾಥ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಉಮೇಶ ಕುಲಾಲ್ ಧನ್ಯವಾದವಿತ್ತರು.

