Share this news

ಕಾರ್ಕಳ.ನ‌.19: ಯುವ ವಿದ್ಯಾರ್ಥಿ ಸಮುದಾಯವನ್ನು ನಾಡಿನ ಸಾಂಸ್ಕೃತಿಕ ಸಂಪತ್ತಾಗಿ ರೂಪಿಸುವುದು‌ ನಮ್ಮ ಆದ್ಯತೆಯಾಗಿದೆ.ಈ ನಿಟ್ಟಿನಲ್ಲಿ ಶಾಸ್ತ್ರೀಯ, ಜಾನಪದ ಕಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ‌400 ವಿದ್ಯಾರ್ಥಿಗಳಿಗೆ ದತ್ತು ಪಡೆದು ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಹೇಳಿದರು.

ಅವರು ಬುಧವಾರ ಕಾರ್ಕಳ ಪ್ರಕಾಶ್ ಹೊಟೆಲ್ ಸಭಾಂಗಣದಲ್ಲಿ ನ.29 ರಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ ಆಳ್ವಾಸ್ ಸಾಂಸ್ಕೃತಿಕ ವೈಭವದ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ತರಬೇತಿ ಸಲುವಾಗಿ ಸುಮಾರು 50 ಕೋ.ರೂ. ಖರ್ಚಾಗುತ್ತದೆ.ನಮ್ಮ ದೇಶವು ಯುವ ಸಂಪತ್ತು ಹೊಂದಿರುವ ದೇಶವಾಗಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಆಳ್ವಾಸ್ ಸಾಂಸ್ಕೃತಿಕ ವೈಭವದ ಮೂಲಕ ಸಾಂಸ್ಕೃತಿಕ ರಂಗಕ್ಕೆ‌ ಚ್ಯುತಿ ಬಾರದಂತೆ ಹಾಗೂ ಅದರ ಮಹತ್ವ ಕಾಪಡಿಕೊಳ್ಳಲಾಗುತ್ತಿದೆ ಎಂದರು.
ನ.29ರಂದು ಕಾರ್ಕಳ ಸ್ಬರಾಜ್ ಮೈದಾನದಲ್ಲಿನ ನಡೆಯಲಿರುವ ಸಾಂಸ್ಕೃತಿಕ ವೈಭವ ಯಶಸ್ವಿಗೊಳಿಸೋಣ, ಎಲ್ಲರ ಸಹಕಾರವಿರಲಿ ಎಂದು ಮೋಹನ್ ಆಳ್ವ ಮನವಿ ಮಾಡಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಪ್ರಸ್ತಾವನೆಗೈದು, ಎಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾದರೂ ಅಲ್ಲಿ ಮೋಹನ್ ಆಳ್ವರ ಕೊಡುಗೆ ಇರುತ್ತದೆ. ಸಮಾಜದಲ್ಲಿ ಸಂಸ್ಕಾರ ರೂಪಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ನ.29ರಂದು ನಡೆಯುವ ಆಳ್ವಾಸ್ ಸಾಂಸ್ಕೃತಿಕ ವೈಭವ ಹೆಚ್ಚು ಜನರು ಭಾಗಿಯಾಗುವಂತೆ ನೋಡಿಕೊಳ್ಳೋಣ. ಎಲ್ಲರೂ ಒಟ್ಟಾಗಿ ಹಿರಿಯರು, ಮಕ್ಕಳನ್ನು ಸೇರಿಸೋಣ. ಎಲ್ಲ ಶಾಲೆಗಳ‌ ಮಕ್ಕಳು, ಶಿಕ್ಷಕರು ಭಾಗವಹಿಸುವಂತೆ ನೋಡಿಕೊಳ್ಳೋಣ ಎಂದರು‌.

ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ! ಮಂಜುನಾಥ್ ಕೋಟ್ಯಾನ್, ಎಸ್ ವಿಟಿ ವಿದ್ಯಾಸಂಸ್ಥೆ ಸಂಚಾಲಕ ಕೆ. ಪಿ. ಶೆಣೈ, ಪ್ರಮುಖರಾದ ವಿಜಯ್ ಶೆಟ್ಟಿ, ಅಶೋಕ್ ಅಡ್ಯಂತಾಯ
ಗುಣಪಾಲ್ ಕಡಂಬ, ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು.‌ ವಿವಿಧ ಕ್ಷೇತ್ರದ ಗಣ್ಯರು, ಪ್ರಮುಖರು‌ ಸಭೆಯಲ್ಲಿ ಭಾಗವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಸ್ವಾಗತಿಸಿದರು‌.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *