
ಕಾರ್ಕಳ : ಕ್ಯಾಂಪ್ಕೋ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲಾ 6 ಸ್ಥಾನಗಳು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತೆಕ್ಕೆಗೆ ಒಲಿದು ಬಂದಿದೆ.ಆಡಳಿತ ಮಂಡಳಿಯ ನಿರ್ದೇಶಕರಾಗಿ ಸತತ ಮೂರನೇ ಬಾರಿಗೆ ಕಡ್ತಲ ದೊಂಡೇರಂಗಡಿಯ ದಯಾನಂದ ಹೆಗ್ಡೆ ಆಯ್ಕೆಯಾಗಿದ್ದಾರೆ.
ನಿರ್ದೇಶಕರ 19 ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 6 ಸ್ಥಾನಗಳಿಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನ.23ರಂದು ಚುನಾವಣೆ ನಡೆದಿತ್ತು. ಸಿ ಕ್ಲಾಸ್ ಸಾಮಾನ್ಯ ವಿಭಾಗದಿಂದ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಸತೀಶ್ಚಂದ್ರ, ದಯಾನಂದ ಹೆಗ್ಡೆ, ಮಹೇಶ್ ಚೌಟ ಎಂ., ಮುರಳೀಕೃಷ್ಣ ಕೆ.ಎನ್., ಪುರುಷೋತ್ತಮ ಭಟ್ ಎಂ., ತೀರ್ಥರಾಮ ಎ.ವಿ. ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಸತ್ಯನಾರಾಯಣ ಎಂ. ಜಿ. ಮತ್ತು ರಾಮ ಪ್ರತೀಕ್ ಕೆ. ಸ್ಪರ್ಧೆ ನಡೆಸಿದ್ದರು.
.
