
ಕಾರ್ಕಳ,ನ,25: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮ ದಿನಾಚರಣೆಯ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅನಾರೋಗ್ಯಪೀಡಿತರಿಗೆ ದಿನಸಿ ವಸ್ತುಗಳನ್ನು ವಿತರಿಸಲಾಯಿತು.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಕೆರ್ವಾಶೆಯ ಪ್ಯಾಲೇದಕ್ಯಾರು ಲಲಿತಾ ಮೂಲ್ಯ, ಕೆರ್ವಾಶೆಯ ದೊಂಪದಬಲಿ ಮನೆ ನಿವಾಸಿ ಜಯಂತಿ ಶೆಟ್ಟಿ ಹಾಗೂ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವ ಬಡಕೊಟ್ಟುಮನೆ ನಿವಾಸಿ ರಮೇಶ್ ಪೂಜಾರಿಯವರ ಮನೆಗೆ ತೆರಳಿ ದಿನಸಿ ವಸ್ತುಗಳನ್ನು ನೀಡಿ ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಕಾಯಿಲೆಯಿಂದ ಬಲಳುತ್ತಿರುವ ಅನಾರೋಗ್ಯ ಪೀಡಿತರಿಗೆ ಬೇಗನೆ ಕಾಯಿಲೆ ಗುಣಮುಖವಾಗಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಘಟಕ ಪ್ರತಿನಿಧಿ ಸದಾನಂದ್ ಸಾಲ್ಯಾನ್, ವಲಯಾಧ್ಯಕ್ಷ ಅಶ್ವಥ್ ನಾರಾಯಣ್, ಜನಜಾಗೃತಿ ವಲಯಾಧ್ಯಕ್ಷ ಜಯರಾಮ್ ಬಂಗೇರ, ಮಾಜಿ ವಲಯಾಧ್ಯಕ್ಷ ಪ್ರಶಾಂತ್ ಡಿ ಸೋಜ, ಯುವವಾಹಿನಿ ಕಾರ್ಕಳ ಅಧ್ಯಕ್ಷ ಪ್ರಕಾಶ್ ಪೂಜಾರಿ,ವಲಯದ ಮೇಲ್ವಿಚಾರಕ ದಿನೇಶ್ ಹೆಗ್ಡೆ ಸಂಯೋಜಕಿ ಸುರೇಖಾ ಕೆರ್ವಾಶೆ, ಸೇವಾಪ್ರತಿನಿಧಿ ಮಂಜುಳಾ, ಒಕ್ಕೂಟದ ಅಧ್ಯಕ್ಷ ಪ್ರಭಾಕರ್ ನಾಯ್ಕ್ ಉಪಸ್ಥಿತರಿದ್ದರು.
.
