Share this news

 

 

 

 

ಕಾರ್ಕಳ,ನ.27:ಇಂದಿನ ಯಾಂತ್ರಿಕ ಯುಗದಲ್ಲಿ ಶಾಲಾ ಮಕ್ಕಳಿಗೆ ಪಠ್ಯದಲ್ಲಿ ಬರುವ ಪೌರಾಣಿಕ ,ಐತಿಹಾಸಿಕ ಘಟನೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಭುವನೇಂದ್ರ ಕಾಲೇಜು ಉಪನ್ಯಾಸಕಿ ಡಾ.ಮಾಲತಿ ಪ್ರಭು ಹೇಳಿದರು.
ಅವರು ಕೆ.ಎಮ್.ಇ.ಎಸ್. ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾತನಾಡಿದರು.
ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಕು. ವರ್ಷಾ ಶೆಣೈಯವರು ಮಾತನಾಡಿ ದೃಢ ನಿರ್ಧಾರದೊಂದಿಗೆ ವಿದ್ಯಾರ್ಥಿಗಳು ಓದಿ ಮುಂದಿನ ಜೀವನದ ಗುರಿಗಳನ್ನು ಕಂಡುಕೊಳ್ಳಬೇಕು. ನಾನು ಈ ಸಂಸ್ಥೆಯ ಪೂರ್ವ ವಿದ್ಯಾರ್ಥಿನಿ ಎಂದು ಹೇಳಲು ಹೆಮ್ಮೆಯೆನಿಸುತ್ತದೆ.ಎಂದರು.
ಮತ್ತೊರ್ವ ಮುಖ್ಯ ಅತಿಥಿ ಮತ್ತು ಕಾಲೇಜಿನ ಪೂರ್ವ ವಿದ್ಯಾರ್ಥಿ ನ್ಯಾಯವಾದಿ ಸದಾನಂದ ಸಾಲಿಯಾನ್ ಮಾತನಾಡಿ, ವಿದ್ಯೆ ಬಾಳಿನ ಬೆಳಕು. ಪೋಷಕರು ತಮ್ಮ ಮಕ್ಕಳಿಗೆ ದಯವಿಟ್ಟು ವಾಹನಗಳನ್ನು ಕೊಡಬೇಡಿ.ವಿದ್ಯಾರ್ಥಿಗಳು ಪಾಠದ ಒಟ್ಟಿಗೆ ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿರುವುದು ಸಂಸ್ಥೆಗೆ ಹೆಮ್ಮೆ,ಹೋದ ವರ್ಷ ವಿಶಿಷ್ಟ ಶ್ರೇಣಿಯಲ್ಲಿ 46 ವಿದ್ಯಾರ್ಥಿ ಪಾಸಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಎಲ್ಲರಿಗೂ ಅಭಿನಂದನೆಗಳು. ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ತನ್ನ ಮೆದುಳಿನ ಶೇಕಡಾ 25 ರಷ್ಟು ಮಾತ್ರ ಬುದ್ಧಿವಂತಿಕೆಯನ್ನು ಉಪಯೋಗದಿಂದ ಜಗತ್ಪ್ರಸಿದ್ಧರಾದರು. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ಗುರಿಯನ್ನು ತಲುಪಬಹುದು” ಎಂದರು.
ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ರವರು ಅಧ್ಯಕ್ಷ ಸ್ಥಾನದಲ್ಲಿ ಮಾತನಾಡಿ, ಸಂಸ್ಥೆಯು ಹಲವಾರು ಡಾಕ್ಟರ್, ಇಂಜಿನಿಯರ್, ಸಿ.ಎ. ಮತ್ತು ಐ.ಎಸ್. ಅಧಿಕಾರಿಗಳನ್ನು ಕೊಟ್ಟಿದೆ. ಸಂಸ್ಥೆಯು ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡಿ, ಬಡ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೂ ಕಲಿಯುವ ಅವಕಾಶಗಳನ್ನು ನೀಡಿದೆ. ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನೂ ಈ ಸಂಸ್ಥೆ ಕೊಟ್ಟಿದೆ ಎಂದರು.
ವಿದ್ಯಾರ್ಥಿನಿ ಅಕ್ಷತಾ ಮತ್ತು ತಂಡದವರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಉಪನ್ಯಾಸಕಿ ಸುಮನ್ ಉಷಾ ಕಿರಣ್ ಮತ್ತು ಶಿಕ್ಷಕಿ ಶುಭಾ ರವರು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು.
ಪೂರ್ವ ವಿದ್ಯಾರ್ಥಿನಿಯರಾದ ತನ್ಟಿ,ಲಾಹಾ, ಆಜ್ಮಿಯಾ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳಿದರು. ಪೋಷಕರ ಪರವಾಗಿ ಚೇತನಾ ನಾಯ್ಕ್ ರವರು ತಮ್ಮ ಅನಿಸಿಕೆಗಳನ್ನು ಹೇಳಿದರು.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲೊಲಿ ಟಾ ಡಿ’ಸಿಲ್ವ ಸ್ವಾಗತಿಸಿದರು. ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರಿಮತಿಯವರು ಅತಿಥಿಗಳನ್ನು ಪರಿಚಯಿಸಿದರು.
ಸಂಸ್ಥೆಯ ಆಡಳಿತ ಮಂಡಲಿಯ ಸದಸ್ಯರಾದ ಮೊಹಮ್ಮದ್ ನವಾಲ್ ರವರುಸಂಸ್ಥೆಯ ಪೂರ್ವ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕಿ ಸಂಗೀತಾ ಧನ್ಯವಾದ ಸಮರ್ಪಣೆಗೈದರು. ಭೌತಶಾಸ್ತ್ರ ಉಪನ್ಯಾಸಕಿ ನಿವೇದಿತಾರವರು ಕಾರ್ಯಕ್ರಮ ನಿರ್ವಹಿಸಿದರು.

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *