Share this news

ಕಾರ್ಕಳ, ನ.29: ಕಾರ್ಕಳ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಒತ್ತಡ ಹಾಕಿ ಅನುದಾನ ಮಂಜೂರು ಮಾಡುವ ನನ್ನ ಪ್ರಯತ್ನಕ್ಕೆ ಶಾಸಕ ಸುನಿಲ್ ಕುಮಾರ್ ಅಡ್ಡಗಾಲು ಹಾಕುತ್ತಿದ್ದು, ಕೇವಲ ತನ್ನ ವೈಯುಕ್ತಿಕ ಸ್ವಾರ್ಥಕ್ಕಾಗಿ, ಸರ್ಕಾರದಿಂದ ಮಂಜೂರಾದ ಅನುದಾನವನ್ನು ವಾಪಾಸು ಕಳುಹಿಸಿ ಆ ಮೂಲಕ ಕಾರ್ಕಳದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಅವರು ಈ ಕುರಿತು ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಮಿಯ್ಯಾರು ಗ್ರಾಮದ ಪರಿಶಿಷ್ಟ ಜಾತಿಯ ಕಾಲೊನಿಯ ರಸ್ತೆ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾಗಿದ್ದ 2 ಕೋ.ರೂ ಅನುದಾನವನ್ನು ಶಾಸಕ ಸುನಿಲ್ ಕುಮಾರ್ ಇಲಾಖೆಯ ಆಯುಕ್ತರ ಮೇಲೆ ಒತ್ತಡದ ಹಾಕಿ ಅನುದಾನ ವಾಪಾಸು ಕಳಿಸಿದ್ದಾರೆ. ಇವರಿಗೆ ವೈಯುಕ್ತಿಕ ಪ್ರತಿಷ್ಠೆ ಬೇಕೇ ಹೊರತು ಕಾರ್ಕಳ ಅಭಿವೃದ್ಧಿ ಬೇಕಾಗಿಲ್ಲ ಎಂದರು.

ಕಳೆದ 20 ವರ್ಷಗಳಿಂದ ದುರಸ್ತಿಯಾಗದ ಪಡುಕುಡೂರು-ಖಜಾನೆ-ಶಿವಪುರ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿ ನಿರಂತರ ಒತ್ತಡ ಹಾಕಿದ ಪರಿಣಾಮವಾಗಿ 5 ಕೋ.ರೂ ಅನುದಾನ ಬಿಡುಗಡೆಯಾಗಿದೆ,ಆದರೆ ಅನುದಾನ ಬಿಡುಗಡೆಯ ಶ್ರೇಯಸ್ಸು ಉದಯ ಶೆಟ್ಟಿಯವರಿಗೆ ಸಿಗುತ್ತದೆ ಎಂದು ಶಾಸಕರು ತಮ್ಮ ಬೆಂಬಲಿಗರಿAದ ಅಪಪ್ರಚಾರ ನಡೆಸುತ್ತಿದ್ದಾರೆ. ಮಾತ್ರವಲ್ಲದೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಹಣ ಸಂದಾಯ ಮಾಡಿ ಪಡುಕುಡೂರು ರಸ್ತೆಯ ವಿಚಾರವಾಗಿ ನನ್ನ ವಿರುದ್ದ ವರದಿ ಮಾಡಿಸಿದ್ದಾರೆ. ಕಾರ್ಕಳದಲ್ಲಿ ಸುನೀಲ್ ಕುಮಾರ್ ಅನಾಚಾರಗಳು ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು ಮುಂಬರುವ ದಿನಗಳಲ್ಲಿ ಜನರೇ ಇದಕ್ಕೆ ಕಡಿವಾಣ ಹಾಕಲಿದ್ದಾರೆ.ಇದಲ್ಲದೇ ಗುತ್ತಿಗೆದಾರ ಹಾಗೂ ನನ್ನ ಮಧ್ಯೆ ಜಗಳ ತಂದಿಡುವ ಕೆಲಸ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಅಗೆಯುವುದುನ ತಪ್ಪು ಎಂದಾದರೆ ನಿಟ್ಟೆಯ ರಸ್ತೆಯನ್ನು ಅಭಿವೃದ್ಧಿಪಡಿಸಲು ಕಳೆದ 5 ವರ್ಷಗಳ ಹಿಂದೆ ಅಗೆದ ರಸ್ತೆಯನ್ನು ಯಾಕೆ ದುರಸ್ತಿ ಮಾಡಿಲ್ಲ.ಜಲ್ಲಿ ರಾಶಿ ಹಾಕಿದ ನಿಮ್ಮದೇ ಪಕ್ಷದ ಗುತ್ತಿಗೆದಾರ ಯಾಕೆ ಕಾಮಗಾರಿ ಮಾಡಿಲ್ಲ, ಈಗ ಯಾರ ವಿರುದ್ಧ ಕೇಸ್ ಹಾಕುತ್ತೀರಿ ಎಂದು ಉದಯ ಶೆಟ್ಟಿ ಪ್ರಶ್ನಿಸಿದರು.

ಜೋಡುರಸ್ತೆ ಸಮೀಪದ ಅಂಗನವಾಡಿ ಕೇಂದ್ರದ ಉದ್ಘಾಟನೆಗೆ ತನ್ನನ್ನು ಕರೆದಿಲ್ಲ ಎಂದು ಅಂಗನವಾಡಿ ಸಹಾಯಕಿಯನ್ನೇ ಕೆಲಸದಿಂದ ತೆಗೆಸಿದ್ದು ಇವರ ಅಹಂ ಭಾವನೆಗೆ ಸಾಕ್ಷಿ. ಗ್ಯಾಸ್ ಏಜೆನ್ಸಿ ಸಂಸ್ಥೆಯೊAದರಲ್ಲಿ ದುಡಿಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನು ರಾಜಕೀಯ ಕಾರಣಕ್ಕೆ ಕೆಲಸದಿಂದ ತೆಗೆಸಿದ್ದು, ನಮ್ಮ ಕಾಂಗ್ರೆಸ್ ಕಾರ್ಯಕರ್ತರ ವ್ಯಾಪಾರ ವಹಿವಾಟುಗಳಿಗೆ ತೊಂದರೆ ನೀಡುವುದು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಸುಳ್ಳು ಮೊಕದ್ದಮೆಗಳನ್ನು ನೀಡಿ ಕಿರುಕುಳ ನೀಡುವುದು ಇಂತಾ ಕಿರುಕುಳವನ್ನು ನೀಡುತ್ತಿರುವ ಸುನೀಲ್ ಕುಮಾರ್‌ಗೆ ಸೂಕ್ತ ಸಮಯದಲ್ಲಿ ಪ್ರತ್ಯುತ್ತರ ನೀಡಲು ನಮಗೂ ತಿಳಿದಿದೆ ಎಂದು ಸವಾಲೆಸೆದರು.

ಕಾರ್ಕಳಕ್ಕೆ ಜವಳಿ ಪಾರ್ಕ್ ಯೋಜನೆ ತಂದು ನೂರಾರು ಜನರಿಗೆ ಉದ್ಯೋಗ ಕೊಡಿಸುತ್ತೇನೆಂದ ಶಾಸಕರ ಜವಳಿ ಪಾರ್ಕ್ ಕಥೆ ಏನಾಯಿತು, ಯಾಕಾಗಿ ಈ ಯೋಜನೆ ರದ್ದಾಯಿತು ಎಂದು ಸ್ಪಷ್ಟಪಡಿಸಿ.ಕಾರ್ಕಳಕ್ಕೆ ನರ್ಸಿಂಗ್ ಕಾಲೇಜು ಮಂಜೂರುಗೊಳಿಸಿ ಅದಕ್ಕೆ ಬೇಕಾದ ಯಾವುದೇ ಮೂಲಸೌಕರ್ಯ ಕಲ್ಪಿಸದೇ ಕಡೆಗಣಿಸಿದ್ದೀರಿ. ಈಗ ಸರ್ಕಾರದ ಮೇಲೆ ಆರೋಪ ಮಾಡುವುದು ಎಷ್ಟು ಸರಿ?ಕಾರ್ಕಳ ರಥಬೀದಿಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ,ವೆAಕಟರಮಣ ದೇವರ ಉತ್ಸವಗಳು ಕೊಳಚೆ ನೀರಿನಲ್ಲೇ ನಡೆಯುವಂತಾಗಿದೆ, ಇದಕ್ಕೆ ಶಾಸಕರು ಯಾಕೆ ಮೌನವಾಗಿದ್ದಾರೆ ಎಂದು ಉದಯ ಶೆಟ್ಟಿ ಪ್ರಶ್ನಿಸಿದರು.

ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವುದಾಗಿ 14 ಕೋ.ರೂ ವೆಚ್ಚದ ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ಹಾಳುಗೆಡವಿದ ಶಾಸಕರು ನಮ್ಮ ಕಾರ್ಕಳದ ಮಾನ ಹರಾಜು ಹಾಕಿದ್ದಾರೆ.ಈ ಯೋಜನೆಯನ್ನು ಪೂರ್ಣಗೊಳಿಸಲು ನಾವು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಸಿದಾಗ ಯೋಜನೆ ಪೂರ್ಣಗೊಳ್ಳದಂತೆ ತಡೆಯಲು ಶಾಸಕ ಸುನಿಲ್ ಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಉದಯ ಶೆಟ್ಟಿ ಗಂಭೀರ ಆರೋಪ ಮಾಡಿದರು.ಯಾವುದೇ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದಾದರೆ ಯಾಕಾಗಿ ಗುದ್ದಲಿ ಪೂಜೆ ಮಾಡಬೇಕು, ಬಿಜೆಪಿಯವರಿಗೆ ಕೇವಲ ಪ್ರಚಾರ ಬೇಕೇ ಹೊರತು ಅಭಿವೃದ್ಧಿಯಲ್ಲ ಎಂದರು.

ಗುತ್ತಿಗೆದಾರನಿಗೆ ಬೆದರಿಕೆ ಹಾಕಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಉದಯ ಶೆಟ್ಟಿ, ನಾನೂ ಕೂಡ ಓರ್ವ ಗುತ್ತಿಗೆದಾರನಾಗಿ ನನ್ನದು ದುಡಿದು ತಿನ್ನುವ ಜಾಯಮಾನ, ನಾನು ಕಮಿಷನ್ ತಿಂದಿಲ್ಲ, ನಾನು ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ್ದೇನೆ ಎನ್ನುವುದು ಸುಳ್ಳು,ಈ ಕುರಿತು ನಾನು ಆಣೆ ಪ್ರಮಾಣಕ್ಕೂ ಸಿದ್ಧ, ಬಿಜೆಪಿಯವರು ಪ್ರಮಾಣಕ್ಕೆ ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು. ನನ್ನ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಶಾಸಕನಾಗುವುದು ನನ್ನ ಕೊನೆಯ ಆಸೆಯಲ್ಲ, ಕಾರ್ಕಳದ ಪ್ರತಿಯೊಬ್ಬ ಕಟ್ಟಕಡೆಯ ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದೇ ನನ್ನ ಗುರಿ ಎಂದರು.

ಸುದ್ಧಿಗೋಷ್ಟಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಗೋಪಿನಾಥ ಭಟ್ ಮುನಿಯಾಲು, ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ರಾಜ್ಯ ದಲಿತ ಸಮಿತಿಯ ರಾಜ್ಯ ಸಂಚಾಲಕಿ ಪ್ರತಿಮಾ ರಾಣೆ, ರಾಜೇಂದ್ರ ದೇವಾಡಿಗ, ಪ್ರದೀಪ್ ಬೇಲಾಡಿ ಉಪಸ್ಥಿತರಿದ್ದರು.

 

 

 

 

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

 

 

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *