
ಕಾರ್ಕಳ, ಡಿ.04: ತಾಲೂಕಿನ ಕಸಬಾ ಗ್ರಾಮದ ಆನೆಕೆರೆ ಬಸದಿ ಬಳಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಸ್ಕೂಟರನ್ನು ಕಳ್ಳರು ಕಳವುಗೈದಿರುವ ಘಟನೆ ಡಿ.1 ರಂದು ನಡೆದಿದೆ.
ಜಾರ್ಕಳ ಮುಂಡ್ಲಿಯ ಗುಣಕರ ಶೆಟ್ಟಿ ಎಂಬವರು ಡಿ.1 ರಂದು ಬೆಳಿಗ್ಗೆ 8.20 ರ ವೇಳೆಗೆ ತಮ್ಮ ಸ್ಕೂಟಿಯ ಡಿಕ್ಕಿಯಲ್ಲಿ Redmi ಕಂಪೆನಿಯ ಮೊಬೈಲ್ ನ್ನು ಇಟ್ಟು ಕಾರ್ಕಳ ಆನೆಕೆರೆ ಬಸದಿ ಬಳಿ ರಸ್ತೆ ಬದಿ ಪಾರ್ಕ್ ಮಾಡಿ ಕೀಯನ್ನು ಸ್ಕೂಟರ್ ನಲ್ಲಿ ಬಿಟ್ಟು ಹೋಗಿದ್ದರು. ಅದೇ ದಿನ ಮಧ್ಯಾಹ್ನ 2 ಗಂಟೆಗೆ ವಾಪಸ್ಸು ಬಂದು ನೋಡಿದಾಗ ರೂ.48,000 ಮೌಲ್ಯದ ಸ್ಕೂಟಿ ಹಾಗೂ ಅದರಲ್ಲಿ ಇಟ್ಟಿದ್ದ ರೂ.3000 ಮೌಲ್ಯದ ಮೊಬೈಲ್ ಕಳುವಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
