
ನವದೆಹಲಿ,ಡಿ.05: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ರೆಪೊ ದರವನ್ನು ಶೇ. 5.5ರಿಂ ಶೇ. 5.25ಕ್ಕೆ ಇಳಿಕೆ ಮಾಡಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ದ್ವೈಮಾಸಿಕ ಸಭೆಯ ನಂತರ, ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಗೆ ಇಳಿಕೆ ಮಾಡುವ ನಿರ್ಧಾರವನ್ನು ಪ್ರಕಟಿಸಲಾಗಿದೆ.
ಹಣಕಾಸು ನೀತಿ ಸಮಿತಿಯ ಸಭೆ ಮುಕ್ತಾಯಗೊಳ್ಳುತ್ತಿದ್ದಂತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, “ರೆಪೋ ದರವನ್ನು ಶೇ. 5.5ದಿಂದ ಶೇ. 5.25ಕ್ಕೆ ಇಳಿಸುವ ಕುರಿತು ಎಂಪಿಸಿ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಆರ್‌ಬಿಐ ರೆಪೋ ದರದಲ್ಲಿ ಒಟ್ಟು 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದ್ದು, ಇದರಿಂದ ಸಾಲಗಾರರು ಕೊಂಚ ನಿರಾಳರಾಗಲಿದ್ದಾರೆ. ನಿನ್ನೆ (ಡಿ.4-ಗುರುವಾರ) ಕನಿಷ್ಠ ಮಟ್ಟಕ್ಕೆ ತಲುಪಿದ ರೂಪಾಯಿ ಕುಸಿತಕ್ಕೆ ಹೋಲಿಸಿದರೆ, ಇದು ದಾಖಲೆಯ ಕಡಿಮೆ ಹಣದುಬ್ಬರವನ್ನು ಹೊಂದಿದೆ. ರೆಪೊ ದರದಲ್ಲಿನ ಕಡಿತವು ಚಿಲ್ಲರೆ ಸಾಲಗಾರರಿಗೆ ಕಡಿಮೆ ಸಾಲ ಇಎಂಐಗಳಾಗಿ ಪರಿವರ್ತನೆಯಾಗುವ ನಿರೀಕ್ಷೆಯಿದೆ.
.
.
