
ಕಾರ್ಕಳ: 220/110/11 ಕೆವಿ ಕೇಮಾರು ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಐಬಿ ಫೀಡರ್ ನಲ್ಲಿ, ಮತ್ತು 110/11ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಟೌನ್ ಫೀಡರ್ನಲ್ಲಿ, ವ್ಯವಸ್ಥಾ ಸುಧಾರಣಾ (ಸ್ಪೇನ್ ಪೋಲ್) ಕಾಮಗಾರಿಯನ್ನು ತುರ್ತಾಗಿ ಹಮ್ಮಿಕೊಂಡಿರುವುದರಿಂದ ಡಿ.07 ಭಾನುವಾರ ಬೆಳಿಗ್ಗೆ 09 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು.
ಆದ್ದರಿಂದ ಕಾರ್ಕಳ ವೆಂಕಟರಮಣ ದೇವಸ್ಥಾನದಿಂದ ಅನಂತಶಯನ ದೇವಸ್ಥಾನದವರೆಗೆ, ಮಾರ್ಕೆಟ್ ರೋಡ್, ಮೂರುಮಾರ್ಗ -ಮಂಗಳೂರು ರಸ್ತೆ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಇದನ್ನು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
.
.
