
ಹೆಬ್ರಿ,ಡಿ.08: ಕಳೆದ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮುನಿಯಾಲು ಮುಟ್ಲುಪಾಡಿ ನಿವಾಸಿ ಕಾಳು ನಾಯ್ಕ್ (79ವ) ಎಂಬವರು ನಿನ್ನೆ (ಭಾನುವಾರ) ಶವವಾಗಿ ಪತ್ತೆಯಾಗಿದ್ದಾರೆ.
ಅವರು ಈ ಹಿಂದೆಯೂ ಹಲವು ಬಾರಿ ಮನೆಯಿಂದ ಹೋದವರು 2-3 ದಿನ ಬಿಟ್ಟು ಮನೆಗೆ ವಾಪಾಸ್ಸಾಗುತ್ತಿದ್ದರು. ಆದರೆ ಈ ಬಾರಿ ಡಿ.3 ರಂದು ಮನೆ ಬಿಟ್ಟು ಹೋಗಿದ್ದ ಅವರು ಮೂರು ದಿನಗಳಾದರೂ ವಾಪಾಸು ಬರದ ಹಿನ್ನಲೆ ಅವರ ಪತ್ನಿ ಡಿ.6 ರಂದು ಅಜೆಕಾರು ಠಾಣೆಗೆ ದೂರು ನೀಡಿದ್ದರು.
ನಿನ್ನೆ (ಡಿ.7) ಪಾದೆಗುಂಡಿ ಎಂಬಲ್ಲಿ ಅವರು ಶವವಾಗಿ ಪತ್ತೆಯಾಗಿದ್ದು, ಮರೆವಿನ ಕಾರಣದಿಂದ ದಾರಿ ತಪ್ಪಿ ಆಕಸ್ಮಿಕವಾಗಿ ಕಾಲು ಜಾರಿಗೆ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
