
ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳಕೋಡಿ ಕುದುರೆಬೆಟ್ಟು ಎಂಬಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿದ ಕಳ್ಳರು ರೂ.12,000 ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಘಟನೆ ನಡೆದಿದೆ.
ಸೆಲಿನ್ ಡಿಸೋಜ ಅವರ ಅನಾರೋಗ್ಯದ ಹಿನ್ನಲೆ ನ.30 ರಂದು ಅವರ ಮಗಳು ಮನೆಗೆ ಬೀಗ ಹಾಕಿ ತಾಯಿಯನ್ನು ತಮ್ಮ ಮನೆಗೆ ಕರೆದೊಯ್ದಿದ್ದರು. ನಂತರ ಡಿ.7 ರಂದು ನೆರೆಮನೆಯ ಪ್ರಿಯಾ ಡಿಸೋಜ ಅವರು ಮನೆಯ ಬಾಗಿಲು ಮುರಿದಿರುವುದಾಗಿ ಕರೆ ಮಾಡಿ ತಿಳಿಸಿದ್ದಾರೆ. ಅದರಂತೆ ಮನೆಯವರು ಬಂದು ನೋಡಿದಾಗ ಹಿಂಬಾಗಿಲಿನ ಬಾಗಿಲು ಮುರಿದು ಒಳಬಂದಿದ್ದ ಕಳ್ಳರು ಸ್ಟೀಲ್ ಟ್ಯಾಪ್ ಮತ್ತು ಇನ್ವರ್ಟರ್ ಬ್ಯಾಟರಿಯನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
