
ಕಾರ್ಕಳ,ಡಿ.23: ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಡಿ. 20 ಮತ್ತು 21 ರಂದು ನಡೆದ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182 ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ, ರೋಟರಿ ಕ್ಲಬ್ ಕಾರ್ಕಳದ ಸದಸ್ಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
12 ಚಿನ್ನದ ಪದಕ, 10 ಬೆಳ್ಳಿ ಪದಕ ಹಾಗೂ 12 ಕಂಚಿನ ಪದಕದೊಂದಿಗೆ ಒಟ್ಟು 34 ಪದಕಗಳನ್ನು ಪಡೆಯುವ ಮೂಲಕ ಕಾರ್ಕಳ ರೋಟರಿ ಸಂಸ್ಥೆಯು ರೋಟರಿ ಅಂತರಾಷ್ಟ್ರೀಯ ಜಿಲ್ಲೆ ವಲಯ 5ರ ಹಿರಿಮೆಯನ್ನು ಎತ್ತಿ ಹಿಡಿದಿದೆ.
ಕ್ರೀಡಾಕೂಟದಲ್ಲಿ ಕಾರ್ಕಳ ರೋಟರಿ ಕ್ಲಬ್ ನ ಸ್ಪೋರ್ಟ್ಸ್ ಛೇರ್ಮನ್ ಜೋಸ್ಸಿ ಕಿರಣ್ ಪಿಂಟೋ, ಜಿಲ್ಲಾ ಮಟ್ಟದ ಅಧಿಕಾರಿಗಳು, ಕ್ಲಬ್ ಸದಸ್ಯರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.
ಕ್ಲಬ್ ಅಧ್ಯಕ್ಷರಾದ ಕೆ ನವೀನ್ ಚಂದ್ರ ಶೆಟ್ಟಿ ಹಾಗೂ ಕ್ಲಬ್ ಕಾರ್ಯದರ್ಶಿ ಚೇತನ್ ನಾಯಕ್ ಅವರು ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


.
.
