
ಕಾರ್ಕಳ, ಡಿ.27: ಕಟ್ಟಡದ ಮೊದಲನೇ ಮಹಡಿಯಲ್ಲಿ ಪೋಸ್ಟ್ ಆಫೀಸ್ ನ ಬೋರ್ಡ್ ಶುಚಿಗೊಳಿಸುತ್ತಿದ್ದ ಕಾರ್ಮಿಕ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ದ ಕಾರ್ಮಿಕ ಪ್ರವೀಣ ದೊಡಮನಿ(19ವ) ಗಾಯಗೊಂಡ ಯುವಕ.
ಕಾರ್ಕಳದ ಸಾಲ್ಮರದಲ್ಲಿರುವ ಕೆ.ಎಫ್ ಮೊಹಮ್ಮದ್ ಎಂಬವರ ಮಾಲೀಕತ್ವದ SAIF ಕಾಂಪ್ಲೆಕ್ಸ್ ನಲ್ಲಿ ರಾಜು ಮೇಸ್ತ್ರಿ ಹೇಳಿದಂತೆ ಡಿ.22 ರಂದು ಪ್ರವೀಣ ದೊಡಮನಿ ಕಟ್ಟಡದ ಮೊದಲನೆ ಮಹಡಿಯಲ್ಲಿರುವ ಪೋಸ್ಟ್ ಆಫೀಸ್ ನ ಬೋರ್ಡ್ ಶುಚಿಗೊಳಿಸುತ್ತಿದ್ದಾಗ ಬೋರ್ಡ್ ಕಿತ್ತು ಬಂದು ಕೆಳಕ್ಕೆ ಬಿದ್ದ ಪರಿಣಾಮ ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
