
ಕಾರ್ಕಳ, ಡಿ.29:ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಕಾರ್ಕಳ ರೋಟರಿ ಕ್ಲಬ್ ರಾಕ್ ಸಿಟಿ ಕಾರ್ಕಳ ಇವರ ಸಹಯೋಗದಲ್ಲಿ 20ನೇ ವರ್ಷದ ‘ಮದ್ಯ ವ್ಯಸನ ವಿಮುಕ್ತಿ ಶಿಬಿರ‘ ಹಾಗೂ ಮದ್ಯ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವ ಪ್ರಯುಕ್ತ ಬೀದಿ ನಾಟಕವು ಕಾರ್ಕಳದ ಬಸ್ಟ್ಯಾಂಡ್ ವಠಾರದಲ್ಲಿ ನಡೆಯಿತು.
ವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ,ಕುಡಿತ ಹಾಗೂ ಇನ್ನಿತರ ದುಶ್ಚಟಗಳಿಗೆ ಬಳಲುತ್ತಿರುವ ರೋಗಿಗಳು ಜನವರಿ 1 ರಿಂದ 10 ರವಗೆ ಉಡುಪಿಯ ಡಾll ಎ ವಿ ಬಾಳಿಗಾ ಆಸ್ಪತ್ರೆಯಲ್ಲಿ ನಡೆಯುವ ಉಚಿತ ಶಿಬಿರದಲ್ಲಿ ಸೇರಿಕೊಂಡು ತಮ್ಮ ಅಮೂಲ್ಯವಾದ ಜೀವನವನ್ನು ಸುಂದರವಾಗಿ ರೂಪಿಸುವಂತೆ ಕರೆ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರ ನಾಯಕ್, ಮಾರ್ಗದರ್ಶಕರಾದ ಡಾll ಭರತೇಶ್ ಆದಿರಾಜ್, ವಲಯ ಸೇನಾನಿ ರೋl ಪ್ರಶಾಂತ್ ಬಿಳಿರಾಯ, ರೋl ವೃಂದಾ ಹರಿಪ್ರಕಾಶ್ ಶೆಟ್ಟಿ, ರೋl ಹರಿಪ್ರಕಾಶ್ ಶೆಟ್ಟಿ, ರೋl ಶ್ರೀವರ್ಮ ಅಜ್ರಿ, ರೋl ಇಕ್ಬಾಲ್ ಅಹ್ಮದ್, ರೋl ಅಬ್ದುಲ್ ರೆಹಮಾನ್, ರೋl ಉಪೇಂದ್ರ ವಾಗ್ಲೆ, ಶ್ರೀಮತಿ ಲಕ್ಷ್ಮೀ ಹೆಗಡೆ, ಶೃತಿ, ಸಹನಾ, ಅದಿತಿ ಮತ್ತು ಅನೇಕ ಪ್ರೇಕ್ಷಕರು ಬೀದಿ ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


.
.
